ದ್ವಿತೀಯ ಟೆಸ್ಟ್: ಭಾರತಕ್ಕೆ ಇನಿಂಗ್ಸ್ ಅಂತರದ ಜಯ, ವಿಶ್ವದಾಖಲೆ ನಿರ್ಮಾಣ

Update: 2019-10-13 09:43 GMT

ಪುಣೆ, ಅ.13: ದ್ವಿತೀಯ ಟೆಸ್ಟ್ ಪಂದ್ಯದುದ್ದಕ್ಕೂ ಪ್ರಾಬಲ್ಯ ಮೆರೆದ ಭಾರತ ತಂಡ ರವಿವಾರ ದಕ್ಷಿಣ ಆಫ್ರಿಕಾ ವಿರುದ್ಧ ಇನಿಂಗ್ಸ್ ಹಾಗೂ 137 ರನ್‌ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಸ್ವದೇಶದಲ್ಲಿ ಸತತ 11ನೇ ಟೆಸ್ಟ್ ಸರಣಿಯನ್ನು ಜಯಿಸಿದ ಭಾರತ ವಿಶ್ವ ದಾಖಲೆ ನಿರ್ಮಿಸಿದೆ.

3 ಪಂದ್ಯಗಳ ಸರಣಿಯಲ್ಲಿ ಸತತ 2ನೇ ಜಯ ಸಾಧಿಸಿದ ಭಾರತ 2-0 ಮುನ್ನಡೆಯೊಂದಿಗೆ ಸರಣಿ ಗೆದ್ದುಕೊಂಡಿದೆ.

ಭಾರತದ ಮೊದಲ ಇನಿಂಗ್ಸ್ 601 ರನ್‌ಗೆ ಉತ್ತರವಾಗಿ 275 ರನ್ ಗಳಿಸಿದ ದಕ್ಷಿಣ ಆಫ್ರಿಕಾ ನಾಲ್ಕನೇ ದಿನವಾದ ರವಿವಾರ ಫಾಲೋ-ಆನ್‌ಗೆ ಸಿಲುಕಿತು. ತನ್ನ 2ನೇ ಇನಿಂಗ್ಸ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ ಹರಿಣ ಪಡೆ 67.2 ಓವರ್‌ಗಳಲ್ಲಿ ಕೇವಲ 189 ರನ್‌ಗೆ ಆಲೌಟಾಯಿತು.

ಭಾರತದ ಪರ ಉಮೇಶ್ ಯಾದವ್(3-22) ಹಾಗೂ ರವೀಂದ್ರ ಜಡೇಜ(3-52)ತಲಾ ಮೂರು ವಿಕೆಟ್‌ಗಳನ್ನು ಪಡೆದಿದ್ದಾರೆ. ಅಶ್ವಿನ್ 45 ರನ್‌ಗೆ 2 ವಿಕೆಟ್ ಪಡೆದಿದ್ದಾರೆ.

ದ.ಆಫ್ರಿಕಾದ ಪರ ಎಲ್ಗರ್ 48 ರನ್ ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News