ಮಕ್ಕಳನ್ನು ಸಮಾಜದ ಆಧಾರ ಸ್ತಂಭ ಮಾಡಿ: ಐಜಿಪಿ ಸೀಮಂತ್ ಕುಮಾರ್ ಸಿಂಗ್

Update: 2019-10-13 18:06 GMT

ಬೆಂಗಳೂರು, ಅ. 13: ಇತ್ತೀಚಿನ ಆಧುನಿಕ ತಂತ್ರಜ್ಞಾನದಲ್ಲಿನ ಮಹತ್ವದ ಸಂಶೋಧನೆಗಳಿಂದ ಯುವ ಪೀಳಿಗೆಗೆ ಉತ್ತಮ ವೇದಿಕೆ ದೊರಕಿದ್ದು, ಅದನ್ನು ಯುವ ಸಮೂಹ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಐಜಿಪಿ ಸೀಮಂತ್ ಕುಮಾರ್ ಸಿಂಗ್ ಕರೆ ನೀಡಿದ್ದಾರೆ.

ರವಿವಾರ ಇಲ್ಲಿನ ಮಾನ್ಯತಾ ಟೆಕ್ ಪಾರ್ಕ್ ಸಭಾಂಗಣದಲ್ಲಿ ಎಸ್‌ಐಪಿ ಅಕಾಡೆಮಿ ಇಂಡಿಯಾ ವತಿಯಿಂದ ಏರ್ಪಡಿಸಿದ್ದ ಅಬಾಕಸ್ ಅಂಕ ಗಣಿತ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು, ತಂತ್ರಜ್ಞಾನದಿಂದ ಹಲವು ಅನುಕೂಲಗಳಿದ್ದು ಇದರ ಸಮರ್ಪಕವಾಗಿ ಮಕ್ಕಳಿಗೆ ನೀಡಿ ಏಳಿಗೆಗೆ ಪೋಷಕರು ಗಮನಹರಿಸುವಂತೆ ಮನವಿ ಮಾಡಿದರು.

ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ಸಮಾನವಾಗಿ ಸ್ವೀಕರಿಸಿ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಇಂಥ ಸ್ಪರ್ಧೆಗಳನ್ನು ಆಯೋಜಿಸಿರುವುದರಿಂದ ಮಕ್ಕಳಿಗೆ ಆತ್ಮವಿಶ್ವಾಸ ಹೆಚ್ಚಲಿದೆ. ಮಕ್ಕಳಿಗೆ ಪೋಷಕರು-ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಸಮಾಜ ಆಧಾರ ಸ್ತಂಭಗಳಾಗಿ ಮಾಡಬೇಕೆಂದು ಅವರು ಸಲಹೆ ನೀಡಿದರು.

ಕಠಿಣ ಲೆಕ್ಕ ಬಿಡಿಸಿದ ಪುಟಾಣಿಗಳು: ಗಣಿತ ಎಂದರೆ ಎಲ್ಲರಿಗೂ ತಲೆನೋವು. ಆದರೆ ಪುಟಾಣಿಗಳಿಗೆ ಮಾತ್ರ ಇದು ಬಹಳ ಸಲೀಸು. ಅಬಾಕಸ್ ಅಂಕಗಣಿತ ಸ್ಪರ್ಧೆಯಲ್ಲಿ 3800 ಮಕ್ಕಳು, ಕೂಡುವುದು, ಕಳೆಯುವುದು, ಭಾಗಿಸುವುದು, ಗುಣಿಸುವುದನ್ನು ತಮ್ಮ ಮನಸ್ಸಿನಲ್ಲಿಯೇ ಲೆಕ್ಕ ಹಾಕಿ ಕ್ಷಣಾರ್ಧದಲ್ಲಿ ಮುಗಿಸುತ್ತಿದ್ದರು. ಅಕಾಡೆಮಿ ಮುಖ್ಯಸ್ಥ ಎಚ್.ಎನ್.ನರೇಂದ್ರ, ದಿನೇಶ್ ವಿಕ್ಟರ್, ಸಿಬಿ ಶೇಖರ್, ಸರಳಾ ಸೇರಿದಂತೆ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News