ಸಾರ್ವಕಾಲಿಕ ಪದಕದ ದಾಖಲೆ ಮುರಿದ ಸಿಮೊನ್ ಬೆಲ್ಸ್

Update: 2019-10-13 18:35 GMT

ಸ್ಟಟ್‌ಗರ್ಟ್, ಅ.13:ವಿಶ್ವ ಜಿಮ್ನಾಸ್ಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಗರಿಷ್ಠ ಪದಕಗಳನ್ನು ಜಯಿಸಿದ ಮೊದಲ ಜಿಮ್ನಾಸ್ಟ್ ಎನಿಸಿಕೊಂಡ ಅಮೆರಿಕದ ಸಿಮೊನ್ ಬೈಲ್ಸ್ ಸಾರ್ವಕಾಲಿಕ ಶ್ರೇಷ್ಠ ದಾಖಲೆಯೊಂದನ್ನು ಮುರಿದರು.

ರವಿವಾರ ಬ್ಯಾಲನ್ಸ್ ಟೀಮ್ ಸ್ಪರ್ಧೆಯಲ್ಲಿ ಪದಕ ಜಯಿಸುವ ಮೂಲಕ ಸಿಮೊನ್ ಈ ಸಾಧನೆ ಮಾಡಿದರು. ಇದು ಸಿಮೊನ್ಸ್ ಗೆದ್ದಿರುವ 24ನೇ ವಿಶ್ವ ಚಾಂಪಿಯನ್‌ಶಿಪ್ ಪದಕವಾಗಿದೆ. 23 ಪದಕಗಳನ್ನು ಜಯಿಸಿರುವ ಬೆಲಾರಸ್ ಪುರುಷ ಜಿಮ್ನಾಸ್ಟ್ ವಿಟಾಲಿ ಸ್ಚೆರ್ಬೊ ದಾಖಲೆ ಪತನವಾಗಿದೆ.

ಬ್ಯಾಲನ್ಸ್ ಟೀಮ್ ಸ್ಪರ್ಧೆಯ ಫೈನಲ್‌ನಲ್ಲಿ ಸಿಮೊನ್ 15.066 ಅಂಕ ಗಳಿಸಿದರೆ, ಚೀನಾದ ಲಿಯು ಟಿಂಗ್‌ಟಿಂಗ್(14.433)ಹಾಗೂ ಲಿ ಶಿಜಿಯಾ(14.300)ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಜಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News