ಜಲಸ್ಪಂದನ ಕಾರ್ಯಕ್ರಮದಲ್ಲಿ 176 ದೂರುಗಳು ಸಲ್ಲಿಕೆ

Update: 2019-10-14 17:02 GMT

ಬೆಂಗಳೂರು, ಅ.14: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಜಲಸ್ಪಂದನ ಕಾರ್ಯಕ್ರಮದಲ್ಲಿ ಹಲವು ಸಮಸ್ಯೆಗಳಿಗೆ ಸಂಬಂಧಿಸಿದ 176 ಕ್ಕೂ ಅಧಿಕ ದೂರುಗಳು ಸಲ್ಲಿಕೆಯಾಗಿವೆ. ನಗರದ ಮಂಡಳಿಯ ಕಚೇರಿ ಆವರಣದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಂಡಳಿಯ ಅಧ್ಯಕ್ಷ ತುಷಾರ್ ಗಿರಿನಾಥ್, ವಿದ್ಯುತ್ ಇಲಾಖೆ, ಬಿಬಿಎಂಪಿ ಸೇರಿದಂತೆ ಅನೇಕ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ನಗರದ ಒಂದು ವಿಭಾಗವಾದ ಮಹದೇವಪುರ ವ್ಯಾಪ್ತಿ(110 ಹಳ್ಳಿ)ಯ 9 ಎಂಎಲ್‌ಡಿ, ಜಿಎಲ್‌ಆರ್ ಆವರಣ, ಹೂಡಿ, ಕುಂದಲಹಳ್ಳಿ, ಹೂಡಿ ಮುಖ್ಯರಸ್ತೆ ಹಾಗೂ ಮಂಡಳಿಯ ಪ್ರಧಾನ ಮುಖ್ಯ ಅಭಿಯಂತರ ಕೆಂಪರಾಮಯ್ಯ, ಕಾರ್ಯನಿರ್ವಾಹಕ ಅಭಿಯಂತರ ಕಚೇರಿ(ವಾಯುವ್ಯ-2)ಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಸ್ಥಳೀಯ ಜನರ ಸಮಸ್ಯೆಗಳನ್ನು ಆಲಿಸಿ, ದೂರುಗಳನ್ನು ಸ್ವೀಕರಿಸಿ ಸಮಸ್ಯೆಯ ತೀಕ್ಷ್ಣತೆಗೆ ಅನುಗುಣವಾಗಿ ತುರ್ತಾಗಿ ಬಗೆಹರಿಸುವ ಭರವಸೆ ನೀಡಿದರು.

ಜನರು ನೀರಿನ ಸರಬರಾಜು ಮತ್ತು ಒಳಚರಂಡಿ ಸಮಸ್ಯೆ, ಹೊಸದಾಗಿ ಕೊಳವೆ ಅಳವಡಿಸುವ ಬಗ್ಗೆ ಹಾಗೂ ಇತರೆ ವಿಷಯಗಳ ಬಗ್ಗೆ ನೂರಾರು ದೂರುಗಳು ನೀಡಿದ್ದಾರೆ ಎಂದು ಮಂಡಳಿಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News