ಹಣಕಾಸಿನ ಕೊರತೆ: ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿ 25,000 ಹೋಂಗಾರ್ಡ್‍ಗಳು

Update: 2019-10-15 13:05 GMT
ಸಾಂದರ್ಭಿಕ ಚಿತ್ರ

ಲಕ್ನೋ, ಅ.15: ರಾಜ್ಯದ ಸುಮಾರು 25,000 ಹೋಂ ಗಾರ್ಡ್‍ಗಳು ತಮ್ಮ ಕೆಲಸ ಕಳೆದುಕೊಳ್ಳುವ ಭಯದಲ್ಲಿದ್ದಾರೆ. ರಾಜ್ಯ  ಪೊಲೀಸ್ ಇಲಾಖೆ ತನ್ನ ಅಕ್ಟೋಬರ್ 11ರ ಆದೇಶದಲ್ಲಿ ಹೋಂ ಗಾರ್ಡ್‍ಗಳ ಕರ್ತವ್ಯ ತಕ್ಷಣದಿಂದ ಜಾರಿಗೆ ಬರುವಂತೆ ಅಂತ್ಯವಾಗುತ್ತದೆ ಎಂದು ಹೇಳಿದೆ.

ಹೋಂಗಾರ್ಡ್‍ಗಳ ವೇತನ ಹೆಚ್ಚಳ ಮಾಡಿದ ನಂತರ ಎದುರಾಗಿರುವ ಹಣಕಾಸಿನ ಕೊರತೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಸರಕಾರ ಇತ್ತೀಚೆಗಷ್ಟೇ ಹೋಂಗಾರ್ಡ್ ಗಳ ದಿನದ ವೇತನವನ್ನು 500 ರೂ.ಯಿಂದ 672 ರೂ.ಗೆ ಏರಿಸಿತ್ತು. ಇನ್ನೊಂದೆಡೆ ರಾಜ್ಯದ ವಿವಿಧೆಡೆ ಕರ್ತವ್ಯಗಳಿಗೆ ನಿಯೋಜಿಸಲ್ಪಡುವ ಹೋಂಗಾರ್ಡ್ ಗಳ ಸಂಖ್ಯೆಯೂ ಇತ್ತೀಚೆಗೆ ಕಡಿಮೆಯಾಗಿದೆ ಎನ್ನಲಾಗಿದೆ.

ರಾಜ್ಯ ಪೊಲೀಸ್ ಇಲಾಖೆಯಲ್ಲಿರುವ ಖಾಲಿ ಹುದ್ದೆಗಳ ಹಿನ್ನೆಲೆಯಲ್ಲಿ ಎಪ್ರಿಲ್ ತಿಂಗಳಲ್ಲಿ 25,000 ಹೋಂಗಾರ್ಡ್ ಗಳನ್ನು ಸರಕಾರ ನೇಮಕಗೊಳಿಸಿತ್ತು. ಆದರೆ ಆಗಸ್ಟ್ ತಿಂಗಳಲ್ಲಿ ರಾಜ್ಯ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಭೆಯಲ್ಲಿ ಅವರ ಸೇವಾವಧಿಯನ್ನು ಅಂತ್ಯಗೊಳಿಸುವ ನಿರ್ಧಾರ ಕೈಗೊಳ್ಳಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News