ಬಿಸಿಸಿಐ ಚುನಾವಣೆ: ಅಂತಿಮ ನಾಮಪತ್ರ ಪಟ್ಟಿ ಬಹಿರಂಗ

Update: 2019-10-15 18:36 GMT

ಮುಂಬೈ, ಅ.15: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಚುನಾವಣೆಯ ಅಂತಿಮ ನಾಮಪತ್ರ ಪಟ್ಟಿ ಸೋಮವಾರ ಬಹಿರಂಗ ಪಡಿಸಲಾಗಿದ್ದು, ಮಂಗಳವಾರ ನಾಮಪತ್ರ ಪರಿಶೀಲನೆ ನಡೆಯಲಿದೆ.

ಮಾಜಿ ಕ್ರಿಕೆಟಿಗ ಸೌರವ್ ಗಂಗುಲಿ (ಬಂಗಾಳ ಕ್ರಿಕೆಟ್ ಅಸೋಸಿಯೇಶನ್)ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಗೃಹ ಸಚಿವ ಅಮಿತ್ ಶಾ ಪುತ್ರ, ಗುಜರಾತ್ ಕ್ರಿಕೆಟ್ ಸಂಸ್ಥೆಯ ಜಯ್ ಶಾ ಕಾರ್ಯದರ್ಶಿ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದಾರೆ ಎಂದು ಬಿಸಿಸಿಐನ ಚುನಾವಣಾಧಿಕಾರಿ ಎನ್.ಗೋಪಾಲಸ್ವಾಮಿ ಬಹಿರಂಗ ಪಡಿಸಿದ್ದಾರೆ. ಉಪಾಧ್ಯಕ್ಷ ಹುದ್ದೆಗೆ ಮಹಿಮ್ ವರ್ಮಾ(ಉತ್ತರಾಖಂಡ ಕ್ರಿಕೆಟ್ ಸಂಸ್ಥೆ) ಹಾಗೂ ಜೊತೆ ಕಾರ್ಯದರ್ಶಿ ಹುದ್ದೆಗೆ ಜಯೇಶ್ ಜಾರ್ಜ್ (ಕೇರಳ ಕ್ರಿಕೆಟ್ ಸಂಸ್ಥೆ)ನಾಮಪತ್ರ ಸಲ್ಲಿಸಿದ್ದಾರೆ.

 ಕೇಂದ್ರ ಸಚಿವ ಅನುರಾಗ್ ಠಾಕೂರ್ ಸಹೋದರ, ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆಯ ಅರುಣ್ ಸಿಂಗ್ ಧುಮಾಲ್ ಖಜಾಂಚಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಪ್ರಭುತೇಜ್ ಸಿಂಗ್ ಭಾಟಿಯಾ(ಛತ್ತೀಸ್‌ಗಢ ರಾಜ್ಯ ಕ್ರಿಕೆಟ್ ಸಂಘ)ಕೌನ್ಸಿಲರ್ ಹುದ್ದೆಗೆ, ಬ್ರಿಜೇಶ್ ಪರಶುರಾಮ್ ಪಟೇಲ್(ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ) ಹಾಗೂ ಎಂ.ಖೈರುಲ್ ಜಮಾಲ್ ಮುಜುಂದಾರ್(ಮಿರೆರಾಂ ಕ್ರಿಕೆಟ್ ಸಂಸ್ಥೆ)ಆಡಳಿತ ಮಂಡಳಿ ಸದಸ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News