ತಮಿಳು ಸಿನೆಮಾದಲ್ಲಿ ಇರ್ಫಾನ್, ಹರ್ಭಜನ್ ಸಿಂಗ್ ನಟನೆ

Update: 2019-10-15 18:46 GMT

ಹೊಸದಿಲ್ಲಿ, ಅ.15: ಭಾರತೀಯ ಕ್ರಿಕೆಟಿಗರಾದ ಇರ್ಫಾನ್ ಪಠಾಣ್ ಹಾಗೂ ಹರ್ಭಜನ್ ಸಿಂಗ್ ತಮಿಳು ಚಿತ್ರವೊಂದರಲ್ಲಿ ನಟಿಸುವುದರೊಂದಿಗೆ ನಟನಾ ಕ್ಷೇತ್ರಕ್ಕೆ ಕಾಲಿಡಲಿದ್ದಾರೆ. ಪಠಾಣ್ ಅಜಯ್ ಜ್ಞಾನಮುತ್ತು ನಿರ್ದೇಶನದ ‘ವಿಕ್ರಮ್ 58’ ಚಿತ್ರದಲ್ಲಿ ನಟಿಸಲಿದ್ದಾರೆ.

 ಸ್ವಿಂಗ್ ಬೌಲರ್ ಪಠಾಣ್ ಟ್ವಿಟರ್‌ನಲ್ಲಿ ವೀಡಿಯೊವೊಂದನ್ನು ಹಂಚಿಕೊಂಡು ಮೊದಲ ಬಾರಿ ಚಲನಚಿತ್ರದಲ್ಲಿ ನಟಿಸುವ ಸುದ್ದಿಯನ್ನು ದೃಢಪಡಿಸಿದ್ದಾರೆ. ‘‘ಹೊಸ ಸಾಹಸ, ಹೊಸ ಸವಾಲನ್ನು ಎದುರು ನೋಡುತ್ತಿರುವೆ’ ಎಂದು ಟ್ವೀಟ್ ಮಾಡಿದ್ದಾರೆ.

ಮತ್ತೊಂದೆಡೆ, ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡ ಕಾರ್ತಿಕ್ ಯೋಗಿ ನಿರ್ದೇಶನದ ‘ಡಿಕ್ಕಿಲೂನಾ’ ಚಿತ್ರದಲ್ಲಿ ಮೊದಲ ಬಾರಿ ನಟಿಸಲು ಸಜ್ಜಾಗಿದ್ದಾರೆ.

ಹರ್ಭಜನ್ ಸಿಂಗ್ ಕೂಡ ಟ್ವೀಟ್ ಮೂಲಕ ತಮಿಳು ಸಿನೆಮಾದ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಡುತ್ತಿರುವುದಾಗಿ ಖಚಿತಪಡಿಸಿದ್ದಾರೆ.

  ಪಠಾಣ್ 2012ರಿಂದ ಯಾವುದೇ ಅಂತರ್‌ರಾಷ್ಟ್ರೀಯ ಪಂದ್ಯವನ್ನು ಆಡಿಲ್ಲ. 2012ರಲ್ಲಿ ಶ್ರೀಲಂಕಾ ವಿರುದ್ಧ ಭಾರತದ ಪರ ಕೊನೆಯ ಬಾರಿ ಟಿ-20 ಪಂದ್ಯವನ್ನು ಆಡಿದ್ದರು. ಹರ್ಭಜನ್ ಸಿಂಗ್ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಭಾರತದ ಎರಡನೇ ಬೌಲರ್ ಪಠಾಣ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News