ಪರಪ್ಪನ ಅಗ್ರಹಾರ ಜೈಲಿನಲ್ಲಿ ಅತ್ಯಾಚಾರ ಆರೋಪಿ ನೇಣಿಗೆ ಶರಣು

Update: 2019-10-16 14:22 GMT

ಬೆಂಗಳೂರು, ಅ.16: ಅತ್ಯಾಚಾರದ ಆರೋಪದಡಿ ಪರಪ್ಪನ ಅಗ್ರಹಾರದ ಜೈಲಿನಲ್ಲಿದ್ದ ಯಲಹಂಕ ವಾಯ್ಸಾ ಪತ್ರಿಕೆಯ ಸಂಪಾದಕ ಅನಿಲ್‌ ರಾಜ್ ನಿನ್ನೆ(ಅ.15) ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮದುವೆ ಆಗುವುದಾಗಿ ನಂಬಿಸಿ ಯುವತಿ ಮೇಲೆ ಅತ್ಯಾಚಾರ ಎಸಗಿದ್ದ ಆರೋಪದಡಿ ಜೈಲು ಸೇರಿದ್ದ ಯಲಹಂಕ ಕ್ಷೇತ್ರದ ಗಾಂಧಿನಗರದ ಅನಿಲ್‌ರಾಜ್ ರಾತ್ರಿ 7.30ರ ವೇಳೆ ಸಿಬ್ಬಂದಿಯ ಕಣ್ತಪ್ಪಿಸಿ 4ನೇ ಬ್ಯಾರಕ್ ಪ್ರವೇಶಿಸಿ ಅಲ್ಲಿನ ಶಿವ ದೇವಾಲಯದ ಕಂಬಿಗೆ ಬೆಡ್‌ಶಿಟ್‌ನಲ್ಲಿ ನೇಣು ಬಿಗಿದುಕೊಂಡು ಅಸ್ವಸ್ಥನಾಗಿದ್ದಾನೆ.

ಇದನ್ನು ಗಮನಿಸಿದ ಜೈಲು ಸಿಬ್ಬಂದಿ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ಕೂಡಲೇ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯುವಾಗಿ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಕುಟುಂಬಸ್ಥರು ಅನಿಲ್‌ ರಾಜ್ ಅವರನ್ನು ನಿನ್ನೆ(ಅ.15) ಮಧ್ಯಾಹ್ನ ಜೈಲಿನಲ್ಲಿ ಭೇಟಿಯಾಗಿ ಹೋಗಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಪರಪ್ಪನ ಅಗ್ರಹಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News