ಮೇರಿ ಕೋಮ್ ಪರ ಒಲವು ತೋರಿದ ಬಿಎಫ್‌ಐ

Update: 2019-10-16 18:50 GMT

ಕೋಲ್ಕತ್ತಾ,ಅ.16: ಚೀನಾದ ವುಹಾನ್‌ನಲ್ಲಿ ಫೆಬ್ರವರಿ 3ರಿಂದ 14ರವರೆಗೆ ನಡೆಯಲಿರುವ ಟೋಕಿಯೊ ಒಲಿಂಪಿಕ್ಸ್ ಅರ್ಹತಾ ಪಂದ್ಯದಲ್ಲಿ ಸ್ಥಾನ ಗಳಿಸಲು 51 ಕೆ.ಜಿ ವಿಭಾಗದಲ್ಲಿ ಮೇರಿ ಕೋಮ್ ಮತ್ತು ನಿಖತ್ ಝರೀನ್ ಮಧ್ಯೆ ಸ್ಪರ್ಧೆ ನಡೆಸುವುದಿಲ್ಲ ಎಂದು ಭಾರತೀಯ ಬಾಕ್ಸಿಂಗ್ ಒಕ್ಕೂಟ (ಬಿಎಫ್‌ಐ) ಸುಳಿವು ನೀಡಿರುವ ಹಿನ್ನೆಲೆಯಲ್ಲಿ ನಿಖತ್ ಕೇಂದ್ರ ಯುವಜನ ಮತ್ತು ಕ್ರೀಡಾ ಸಹಾಯಕ ಸಚಿವ ಕಿರಣ್ ರಿಜಿಜು ಅವರನ್ನು ಭೇಟಿಯಾಗಲು ಮುಂದಾಗಿದ್ದಾರೆ. ಚೀನಾದಲ್ಲಿ ನಡೆಯಲಿರುವ ಪಂದ್ಯಕ್ಕೆ ಮೋರಿ ಕೋಮ್ ಉತ್ತಮ ಆಯ್ಕೆಯಾಗಿದ್ದಾರೆ ಎಂದು ಬಿಎಫ್‌ಐ ಅಧ್ಯಕ್ಷ ಅಜಯ್ ಸಿಂಗ್ ಹೇಳಿಕೆ ನೀಡಿದ್ದು ಇದರಿಂದ ನಿಖತ್ ಅಸಮಾಧಾನಗೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ನಿಖತ್, ‘‘ಇದು ಬಾಕ್ಸಿಂಗ್ ಇಲ್ಲಿ ಯಾರು ಬೇಕಾದರೂ ಗೆಲ್ಲಬಹುದು. ನನ್ನನ್ನು ಕಳುಹಿಸಿ ಎಂದು ನಾನು ಹೇಳುತ್ತಿಲ್ಲ. ಆದರೆ ನನಗೂ ಸಮಾನ ಅವಕಾಶ ನೀಡಿ. ಅವರು ಕೇವಲ ಚಿನ್ನ ಮತ್ತು ಬೆಳ್ಳಿ ವಿಜೇತರನ್ನು ಮಾತ್ರ ಒಲಿಂಪಿಕ್ಸ್‌ಗೆ ಕಳುಹಿಸುತ್ತಾರೆ ಎಂದು ಹೇಳಿಕೊಂಡಿದ್ದರು. ಆದರೆ ಈಗ ಅವರು ಮಹಿಳೆಯರ ವಿಷಯದಲ್ಲೂ ನಿಯಮ ಬದಲಿಸುತ್ತಿದ್ದಾರೆ’’ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News