ಭವಿಷ್ಯದ ತಂತ್ರಜ್ಞಾನ ಮಾನವನ ಮೆದುಳನ್ನು ಬದಲಾಯಿಸುತ್ತದೆ: ವೇಣುಗೋಪಾಲ್

Update: 2019-10-17 17:34 GMT

ಬೆಂಗಳೂರು, ಅ.17: ಭವಿಷ್ಯದಲ್ಲಿ, ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ ಮತ್ತು ಡೀಪ್ ಲರ್ನಿಂಗ್‌ನಂತಹ ತಂತ್ರಜ್ಞಾನಗಳು ಮಾನವನ ಮೆದುಳನ್ನು ಬದಲಾಯಿಸುತ್ತವೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವೇಣುಗೋಪಾಲ್ ತಿಳಿಸಿದ್ದಾರೆ. ಕಂಪ್ಯೂಟರ್ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗವು ಬೆಂಗಳೂರಿನ ಯೂನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಎಂಜಿನಿಯರಿಂಗ್(ಯುವಿಸಿಇ) ಯಲ್ಲಿ ಕೃತಕ ಬುದ್ಧಿಮತ್ತೆ ಕುರಿತು ಎಐಸಿಟಿಇ-ಅಟಲ್ ಅಕಾಡೆಮಿ ಪ್ರಾಯೋಜಿತ ಒಂದು ವಾರ ಬೋಧಕವರ್ಗದ ಅಭಿವೃದ್ಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೃತಕ ಬುದ್ಧಿಮತ್ತೆ ಒಂದು ಕಾಲಘಟ್ಟದಲ್ಲಿ ವಿಕಸನಗೊಳ್ಳುತ್ತಾ, ಇವತ್ತಿನ ಕಾಲದಲ್ಲಿ ಆಧುನಿಕ ತಂತ್ರಜ್ಞಾನವಾಗಿ ರೂಪಾಂತರಗೊಂಡಿದೆ. ಮಾನವನ ಮೆದುಳು ಪರಸ್ಪರ ಸಂಬಂಧ ಹೊಂದಿರುವ ನ್ಯೂರಾನ್‌ಗಳು ಮತ್ತು ಸಿನಾಪ್‌ಗಳ ಸಂಗ್ರಹವಾಗಿದೆ. ಇದಲ್ಲದೆ, ಐಬಿಎಂ ಬಗ್ಗೆ ಮಾತನಾಡಿದ ಅವರು, ಇದು ಆಳವಾದ ಕಲಿಕೆಯ ತಂತ್ರಗಳನ್ನು ಬಳಸಿಕೊಂಡು ಪರಸ್ಪರ ಸಂಪರ್ಕ ಹೊಂದಿದ 30 ಮಿಲಿಯನ್ ಟ್ರಾನ್ಸಿಸ್ಟರ್‌ಗಳ ಸಹಾಯದಿಂದ ಮಾನವ ಮೆದುಳನ್ನು ಅನುಕರಿಸುತ್ತಿದೆ. ಹಿಂದಿನ, ವರ್ತಮಾನದಲ್ಲಿ ವಿಜ್ಞಾನವು ಹೇಗೆ ಅಸ್ತಿತ್ವದಲ್ಲಿದೆ ಮತ್ತು ಭವಿಷ್ಯದಲ್ಲಿ ಅದು ಹೇಗೆ ಇರುತ್ತದೆ ಎಂದು ಅವರು ವಿವರಿಸಿದರು.

ಈ ಶೈಕ್ಷಣಿಕ ವರ್ಷದಲ್ಲಿ ಐದನೇ ಎಫ್ಡಿಪಿ ನಡೆಸಿದ ಕಂಪ್ಯೂಟರ್ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದ ಅಧ್ಯಾಪಕ ಸದಸ್ಯರನ್ನು ಯುವಿಸಿಇ ಪ್ರಾಂಶುಪಾಲ ಪ್ರೊ.ಎಚ್.ಎನ್.ರಮೇಶ್ ಅಭಿನಂದಿಸಿದರು. ವಿಜ್ಞಾನ ಮತ್ತು ತಂತ್ರಜ್ಞಾನದ ವಿವಿಧ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆಯ ಮಹತ್ವವನ್ನು ಅವರು ವಿವರಿಸಿದರು ಮತ್ತು ಎಫ್ಡಿಪಿ ಆಯೋಜಿಸಿದ್ದಕ್ಕಾಗಿ ಸಂಘಟಕರಿಗೆ ಧನ್ಯವಾದ ಅರ್ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News