ಕನ್ನಡದ ಸಮಸ್ಯೆ ನನ್ನ ಸಮಸ್ಯೆ: ಟಿ.ಎಸ್.ನಾಗಾಭರಣ

Update: 2019-10-17 17:36 GMT

ಬೆಂಗಳೂರು, ಅ.17: ಕನ್ನಡದ ಕೆಲಸವೆಂದರೆ ಅದು ಇಡೀ ನಾಡಿನ ಕೆಲಸವಾಗಿದೆ. ಕನ್ನಡದ ಸಮಸ್ಯೆ ನನ್ನ ಸಮಸ್ಯೆ ಇದ್ದಂತೆ. ಕನ್ನಡದ ಸಮಸ್ಯೆಗಳನ್ನು ಬಗೆಹರಿಸಲು ಸಮರ್ಪಣಾ ಮನೋಭಾವದಿಂದ ಕೆಲಸ ಮಾಡುವುದಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ಟಿ.ಎಸ್.ನಾಗಾಭರಣ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದ ಎರಡನೇ ಮಹಡಿಯಲ್ಲಿರುವ ಅಧ್ಯಕ್ಷರ ಕೊಠಡಿಯಲ್ಲಿ ನಾಡಗೀತೆ ಹಾಡುವುದರ ಮೂಲಕ ಅಧಿಕಾರಿ ಸ್ವೀಕರಿಸಿದ ಅವರು, ರಾಜ್ಯ ಸರಕಾರ ನನಗೆ ಮಹತ್ತರವಾದ ಜವಾಬ್ದಾರಿ ನೀಡಿದೆ. ಕನ್ನಡಕ್ಕಾಗಿ ಮಾದರಿಯಾದ ಕೆಲಸಗಳನ್ನು ಮಾಡಬೇಕಾದ ಅಗತ್ಯವಿದ್ದು, ಅದಕ್ಕಾಗಿ ಎಲ್ಲರ ಸಹಕಾರವನ್ನು ಬೆಂಬಲವನ್ನು ಕೋರುತ್ತೇನೆಂದು ತಿಳಿಸಿದರು.

  ಈ ಸಂದರ್ಭದಲ್ಲಿ ಹಿರಿಯ ರಂಗಕರ್ಮಿ ಹಾಗೂ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ ಶ್ರೀನಿವಾಸ ಜಿ.ಕಪ್ಪಣ್ಣ, ಹಿರಿಯ ಸಾಹಿತಿ ಪ್ರತಿಭಾ ನಂದಕುಮಾರ್, ಹಿರಿಯ ಗಾಯಕರಾದ ಬಿ.ಕೆ.ಸುಮಿತ್ರಾ, ಸಂಸ್ಕಾರ ಭಾರತಿ ರಾಮಚಂದ್ರ, ವೆಂಕಟೇಶ್ ಮೂರ್ತಿ, ರಮಾ ಪುಸ್ತಕಂ, ಕಲ್ಪನಾ ನಾಗನಾಥ್, ಸದಸ್ಯರಾದ ರೋಹಿತ್ ಚಕ್ರತೀರ್ಥ, ಪ್ರೊ.ಅಬ್ದುಲ್ ರೆಹಮಾನ್ ಪಾಷ, ರಮೇಶ್ ಗುಬ್ಬಿಗೂಡು ಹಾಗೂ ಹಲವಾರು ಮಂದಿ ಕಲಾವಿದರು, ನಾಗಾಭರಣ ಕುಟುಂಬದ ಸದಸ್ಯರು ಾಗೂ ಸ್ನೇಹಿತರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News