‘ ಅ.19ರಂದು ಹಜ್ ಆಯೋಜಕರ ಸಮಾವೇಶ’

Update: 2019-10-17 17:38 GMT

ಬೆಂಗಳೂರು, ಅ.17: ರಾಜ್ಯ ಹಜ್ ಆಯೋಜಕರ ಸಂಘದ ಸಮಾವೇಶವನ್ನು ಅ.19ರಂದು ಬೆಳಗ್ಗೆ 10 ಗಂಟೆಗೆ ನಗರದ ಬಾಗಲೂರು ರಸ್ತೆಯಲ್ಲಿರುವ ಸಿದ್ದೀಖಿ ಫಾರ್ಮ್ಸ್‌ನಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಇಕ್ಬಾಲ್ ಎ.ಸಿದ್ದೀಖಿ ತಿಳಿಸಿದ್ದಾರೆ.

ಈ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಮಾಜಿ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್, ಗೌರವ ಅತಿಥಿಗಳಾಗಿ ರಾಜ್ಯ ಹಜ್ ಸಮಿತಿಯ ಸಿಇಓ ಸರ್ಫರಾಝ್ ಖಾನ್, ಇರಾಕ್ ಹಾಗೂ ಜೋರ್ಡನ್ ಮಾಜಿ ರಾಯಭಾರಿ ಆರ್.ದಯಾಕರ ಪಾಲ್ಗೊಳ್ಳಲಿದ್ದಾರೆ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News