ಉ.ಪ್ರ. ವಿರುದ್ಧ ಹರ್ಯಾಣಕ್ಕೆ ರೋಚಕ ಜಯ

Update: 2019-10-18 04:49 GMT

ವಿಜಯ ಹಝಾರೆ ಟ್ರೋಫಿ

ವಡೋದರ, ಅ.17: ವಿಜಯ ಹಝಾರೆ ಟ್ರೋಫಿಯ ‘ಬಿ’ ಗುಂಪಿನ ಪಂದ್ಯದಲ್ಲಿ ಹರ್ಯಾಣ ತಂಡ ಉತ್ತರಪ್ರದೇಶದ ವಿರುದ್ಧ 20 ರನ್‌ಗಳ ರೋಚಕ ಜಯ ಸಾಧಿಸಿದೆ.

ಇಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ಉತ್ತರ ಪ್ರದೇಶ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು.

 ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಹರ್ಯಾಣ 49.1 ಓವರ್‌ಗಳಲ್ಲಿ 208 ರನ್‌ಗಳಿಗೆ ಆಲೌಟಾಗಿದೆ. ಆರಂಭಿಕ ಆಟಗಾರ ನಿತಿನ್ ಸೈನಿ(65,106 ಎಸೆತ, 6 ಬೌಂಡರಿ)ಸರ್ವಾಧಿಕ ರನ್ ಗಳಿಸಿದ್ದು, ಜಯಂತ್ ಯಾದವ್(32), ಅಂಕಿತ್ ಕುಮಾರ್(30)ಹಾಗೂ ನಾಯಕ ಅಮಿತ್ ಮಿಶ್ರಾ(ಔಟಾಗದೆ 25)ಎರಡಂಕೆಯ ಸ್ಕೋರ್ ಗಳಿಸಿದರು.

ಗೆಲ್ಲಲು 209 ರನ್ ಬೆನ್ನಟ್ಟಿದ ಉತ್ತರಪ್ರದೇಶ 44.1 ಓವರ್‌ಗಳಲ್ಲಿ 188 ರನ್‌ಗಳಿಗೆ ಆಲೌಟಾಯಿತು. ಮಧ್ಯಮ ಕ್ರಮಾಂಕದ ದಾಂಡಿಗ ಆರ್.ಕೆ.ಸಿಂಗ್ ತಂಡದ ಪರ ಏಕಾಂಗಿ ಹೋರಾಟ(68, 74 ಎಸೆತ, 8 ಬೌಂಡರಿ,1 ಸಿಕ್ಸರ್)ನೀಡಿದರು.

ಉತ್ತರಪ್ರದೇಶ ಒಂದು ಹಂತದಲ್ಲಿ 40 ರನ್‌ಗೆ 3 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆಗ 4ನೇ ವಿಕೆಟ್ ಜೊತೆಯಾಟದಲ್ಲಿ ಆಕಾಶದೀಪನಾಥ್(34)ಅವರೊಂದಿಗೆ 74 ರನ್ ಗಳಿಸಿದ ಸಿಂಗ್ ತಂಡವನ್ನು ಆಧರಿಸಿದರು. ಆದರೆ, ಈ ಇಬ್ಬರು ಬೇರ್ಪಟ್ಟ ಬಳಿಕ ಉತ್ತರಪ್ರದೇಶ ಕುಸಿತದ ಹಾದಿ ಹಿಡಿದು ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು.

ಹರ್ಯಾಣದ ಪರ ಹರ್ಷಲ್ ಪಟೇಲ್(3-34)ಯಶಸ್ವಿ ಬೌಲಿಂಗ್ ಸಂಘಟಿಸಿದರು. ಅಮಿತ್ ಮಿಶ್ರಾ(2-33), ಯಜುವೇಂದ್ರ ಚಹಾಲ್(2-40)ತಲಾ 2 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News