ಆತಿಥ್ಯಕ್ಕೆ ಬಿಡ್ ಸಲ್ಲಿಸಿದ ಭಾರತ

Update: 2019-10-18 05:02 GMT

ಲಾಸನ್, ಅ.17: ಮುಂದಿನ ಆವೃತ್ತಿಯ ಪುರುಷರ ವಿಶ್ವಕಪ್‌ನ ಆತಿಥ್ಯವಹಿಸಿಕೊಳ್ಳಲು ಭಾರತ ಸಹಿತ ಮೂರು ದೇಶಗಳು ಬಿಡ್‌ಗಳನ್ನು ಸಲ್ಲಿಸಿವೆ ಎಂದು ಅಂತರ್‌ರಾಷ್ಟ್ರೀಯ ಹಾಕಿ ಫೆಡರೇಶನ್(ಎಫ್‌ಐಎಚ್)ಗುರುವಾರ ತಿಳಿಸಿದೆ.

ಈಗಾಗಲೇ ಮೂರು ಬಾರಿ ವಿಶ್ವಕಪ್‌ನ ಆತಿಥ್ಯವಹಿಸಿಕೊಂಡಿದ್ದ ಭಾರತ 2023ರ ಜನವರಿ 13ರಿಂದ 29ರ ತನಕ ನಡೆಯುವ ಟೂರ್ನಿಯ ಆತಿಥ್ಯಕ್ಕೆ ಬಿಡ್ ಸಲ್ಲಿಸಿದೆ. ಇತರ ಎರಡು ರಾಷ್ಟ್ರಗಳಾಗಿರುವ ಬೆಲ್ಜಿಯಂ ಹಾಗೂ ಮಲೇಶ್ಯಾ ಕೂಡ ಪುರುಷರ ಹಾಕಿ ವಿಶ್ವಕಪ್ ಆತಿಥ್ಯಕ್ಕೆ ಬಿಡ್ ಕಳುಹಿಸಿಕೊಟ್ಟಿವೆ. ಆದರೆ ಈ ಎರಡು ದೇಶಗಳು 2022ರ ಜು.1ರಿಂದ 17ರ ತನಕ ನಡೆಯುವ ಟೂರ್ನಿಯ ಆತಿಥ್ಯಕ್ಕೆ ಆದ್ಯತೆ ನೀಡಿವೆ. ಮಹಿಳೆಯರ ಹಾಕಿ ವಿಶ್ವಕಪ್‌ಗೆ ಐದು ದೇಶಗಳು ಬಿಡ್ ಸಲ್ಲಿಸಿವೆ ಎಂದು ಎಫ್‌ಐಎಚ್ ಪ್ರಕಟನೆಯೊಂದರಲ್ಲಿ ತಿಳಿಸಿದೆ. ಜರ್ಮನಿ, ಸ್ಪೇನ್ ಹಾಗೂ ನೆದರ್‌ಲ್ಯಾಂಡ್ 2022ರ ಜು.1ರಿಂದ 7ರ ತನಕ ನಡೆಯುವ ಮಹಿಳಾ ವಿಶ್ವಕಪ್‌ಗೆ, ಮಲೇಶ್ಯಾ ಹಾಗೂ ನ್ಯೂಝಿಲ್ಯಾಂಡ್ 2023ರ ಜ.13ರಿಂದ 29ರ ತನಕ ನಡೆಯುವ ಟೂರ್ನಮೆಂಟ್‌ಗಳ ಆತಿಥ್ಯವಹಿಸಿಕೊಳ್ಳಲು ಬಿಡ್ ಸಲ್ಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News