ಭಾರತ-ಪಾಕ್ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಕುರಿತು ಮೋದಿ, ಇಮ್ರಾನ್ ನಿರ್ಧರಿಸಲಿದ್ದಾರೆ: ಗಂಗುಲಿ

Update: 2019-10-18 05:05 GMT

ಹೊಸದಿಲ್ಲಿ, ಅ.17: ಭಾರತ ಹಾಗೂ ಪಾಕಿಸ್ತಾನ ಮಧ್ಯದ ದ್ವಿಪಕ್ಷೀಯ ಸರಣಿ ಮತ್ತೆ ಆರಂಭವಾಗಲು ಉಭಯ ದೇಶಗಳ ಪ್ರಧಾನಮಂತ್ರಿಗಳ ಅನುಮತಿ ಬೇಕು ಎಂದು ಬಿಸಿಸಿಐನ ನಿಯೋಜಿತ ಅಧ್ಯಕ್ಷ, ಮಾಜಿ ನಾಯಕ ಸೌರವ್ ಗಂಗುಲಿ ಹೇಳಿದ್ದಾರೆ.

 ಕೋಲ್ಕತಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗಂಗುಲಿ ಬಳಿ ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಸರಣಿ ಕುರಿತು ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಗಂಗುಲಿ,‘‘ನೀವು ಈ ಪ್ರಶ್ನೆಯನ್ನು ಮೋದಿಜಿ ಹಾಗೂ ಪಾಕಿಸ್ತಾನದ ಪ್ರಧಾನಮಂತ್ರಿಯನ್ನು ಕೇಳಬೇಕು. ಅಂತರ್‌ರಾಷ್ಟ್ರೀಯ ಪ್ರವಾಸ ಎಲ್ಲವೂ ಸರಕಾರದ ಮೂಲಕ ನಡೆಯುವ ಕಾರಣ ನಿಶ್ಚಿತವಾಗಿ ನಾವು ಅನುಮತಿ ಪಡೆಯಬೇಕಾಗುತ್ತದೆ. ಹೀಗಾಗಿ ಈ ಪ್ರಶ್ನೆಗೆ ನಮ್ಮ ಬಳಿ ಉತ್ತರವಿಲ್ಲ’’ ಎಂದರು.

ಭಾರತ ಹಾಗೂ ಪಾಕಿಸ್ತಾನ ದ್ವಿಪಕ್ಷೀಯ ಸರಣಿಯನ್ನಾಡದೇ ಏಳು ವರ್ಷ ಕಳೆದಿದೆ. 2012ರಲ್ಲಿ ಭಾರತ ತಂಡ ಪಾಕಿಸ್ತಾನದೊಂದಿಗೆ 2 ಟಿ-20 ಹಾಗೂ 3 ಏಕದಿನ ಪಂದ್ಯಗಳನ್ನು ಒಳಗೊಂಡ ಸೀಮಿತ ಓವರ್‌ಗಳ ಕ್ರಿಕೆಟ್ ಸರಣಿಯ ಆತಿಥ್ಯವಹಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News