ಲೋಕಾಯುಕ್ತರಿಗೆ ಆಸ್ತಿ ವಿವರ ಸಲ್ಲಿಕೆಗೆ ಬಿಬಿಎಂಪಿ ಸದಸ್ಯರ ನಕಾರ

Update: 2019-10-18 18:29 GMT

ಬೆಂಗಳೂರು, ಅ.18: ಸಂಸದ ಹಾಗೂ ಪಾಲಿಕೆ ಸದಸ್ಯ ಮುನಿಸ್ವಾಮಿ, ಮಾಜಿ ಮೇಯರ್ ಸಂಪತ್‌ರಾಜ್, ಪದ್ಮಾವತಿ ಸೇರಿದಂತೆ ಬಿಬಿಎಂಪಿಯ 198 ಕಾರ್ಪೋರೇಟರ್‌ಗಳ ಪೈಕಿ ಇನ್ನೂ 55 ಜನರು ಲೋಕಾಯುಕ್ತಕ್ಕೆ ತಮ್ಮ ಆಸ್ತಿ ವಿವರ ಸಲ್ಲಿಕೆ ಮಾಡಿಲ್ಲ.

ಬಿಬಿಎಂಪಿ ಸದಸ್ಯರು ಕಡ್ಡಾಯವಾಗಿ ಆಸ್ತಿ ವಿವರ ಸಲ್ಲಿಸಬೇಕು ಎಂದು ಲೋಕಾಯುಕ್ತ ವಿಶ್ವನಾಥ್ ಶೆಟ್ಟಿ ಪಾಲಿಕೆ ಸದಸ್ಯರಿಗೆ ನೋಟಿಸ್ ಜಾರಿ ಮಾಡಿದ್ದರು. ಅನಂತರ ಸುಮಾರು 143 ಜನರು ತಮ್ಮ ಸಂಪೂರ್ಣ ಆಸ್ತಿ ವಿವರ ಸಲ್ಲಿಸಿದ್ದರೆ, ಉಳಿದವರು ವಿವರ ಸಲ್ಲಿಕೆಗೆ ಹಿಂದೇಟು ಹಾಕುತ್ತಿದ್ದಾರೆ.

ಯಾರೆಲ್ಲಾ ವಿವರ ಸಲ್ಲಿಸಬೇಕು: ಬಿಬಿಎಂಪಿ ಸದಸ್ಯರಾದ ನೇತ್ರಪಲ್ಲವಿ, ಎಂ.ಸತೀಶ್, ಮುನಿಂದ್ರ ಕುಮಾರ್, ನಾಗಭೂಷಣ್, ಎನ್.ಲೋಕೇಶ್, ನರಸಿಂಹ ನಾಯ್ಕ, ಪ್ರಮೀಳಾ, ಆನಂದ್ ಕುಮಾರ್, ರಾಜಶೇಖರ್, ಇರ್ಷದ್ ಬೇಗಂ, ನೌಸೀರ್ ಅಹಮ್ಮದ್, ಅಬ್ದುಲ್ ವಾಜೀದ್, ಆಶಾ ಸುರೇಶ್, ಲಲಿತಾ ತಿಮ್ಮನಂಜಯ್ಯ, ಕೆ.ವಿ.ರಾಜೇಂದ್ರಕುಮಾರ್ ವಿವರ ಸಲ್ಲಿಸಬೇಕಿದೆ.

ಎಂ.ಮಹದೇವ, ಗಣೇಶ್ ರಾವ್ ಮಾನೆ, ಎಸ್.ರಾಜು, ಕೆ.ಪೂರ್ಣಿಮಾ, ವಿ.ಸುರೇಶ್, ಅರುಣಾ ರವಿ, ಭುವನೇಶ್ವರಿ, ಮಹಮ್ಮದ್ ಜಮೀರ್ ಷಾ, ಹೇಮಲತಾ ಸತೀಶ್ ಸೇಠ್, ಎಚ್.ಮಂಜುನಾಥ್, ಗಂಗಮ್ಮ ರಾಜಣ್ಣ, ಅಬ್ದುಲ್ ರಕೀಬ್ ಜಾಕೀರ್, ಆನಂದಕುಮಾರ್, ನಿತೀಶ್ ಪುರುಷೋತ್ತಮ್, ಎಸ್.ಮುನಿಸ್ವಾಮಿ, ಮಮತಾ ಸರವಣ, ಶಕೀಲ್ ಅಹಮ್ಮದ್, ಫರಿದಾ, ಗೋವಿಂದರಾಜು ಆಸ್ತಿ ವಿವರ ಸಲ್ಲಿಸದವರ ಪಟ್ಟಿಯಲ್ಲಿದ್ದಾರೆ.

ಉಮಾವತಿ ಪದ್ಮರಾಜ್, ಜಿ.ಶಿಲ್ಪಾ, ದೀಪಾ ನಾಗೇಶ್, ಡಿ.ಪ್ರಮೋದ್, ದಾಸೇಗೌಡ, ತೇಜಸ್ವಿನಿ, ಇಮ್ರಾನ್ ಪಾಷ, ಸೀಮಾ ಅಲ್ತಫ್, ಜನೀಮಾ ಖಾನಂ, ಡಿ.ಎನ್.ರಮೇಶ್, ಜಿ.ಎಂ.ಪುಷ್ಪಾ, ಕೆಂಪೇಗೌಡ, ಅನುಪಮ, ಅನ್ಸರ್ ಪಾಷ, ನಾರಾಯಣರಾಜು, ಕೆ.ಸೋಮಶೇಖರ್ ಸೇರಿದಂತೆ ಅನೇಕರು ವಿವರ ಸಲ್ಲಿಸದೇ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ.

ಪ್ರತಿ ವರ್ಷ ಆಸ್ತಿ ವಿವರವನ್ನು ನಾವು ಆಯ್ಕೆಯಾದ ನಂತರ ಮೇಯರ್‌ಗೆ ಸಲ್ಲಿಸುತ್ತಿದ್ದೇವೆ. ಲೋಕಾಯುಕ್ತರಿಗೆ ವಿವರ ಸಲ್ಲಿಸಬೇಕಾದ ಅಗತ್ಯವಿಲ್ಲ ಎಂಬುದು ಪಾಲಿಕೆ ಸದಸ್ಯರ ವಾದವಾಗಿದೆ. ಆದರೆ, ಇದ್ಯಾವುದಕ್ಕೂ ಮನ್ನಣೆ ನೀಡದ ಲೋಕಾಯುಕ್ತರು ಕಡ್ಡಾಯವಾಗಿ ಆಸ್ತಿ ವಿವರ ನೀಡಿ, ಇಲ್ಲದಿದ್ದರೆ ನೋಟಿಸ್ ಜಾರಿ ಮಾಡಲಾಗುವುದು ಎಂದಿದ್ದಾರೆ.

ಇಷ್ಟೇ ಅಲ್ಲದೇ ರಾಜ್ಯಪಾಲರ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆ ಸಂದೇಶ ರವಾನಿಸಿದ ಬಳಿಕ ಬಿಬಿಎಂಪಿಯ ಸದಸ್ಯರು ಆಸ್ತಿ ವಿವರ ಸಲ್ಲಿಸಲು ಮುಂದಾಗಿದ್ದಾರೆ. 198 ಸದಸ್ಯರಿರುವ ಪಾಲಿಕೆಯಲ್ಲಿ 143 ಜನರಷ್ಟೇ ವಿವರ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News