ಕೆ.ಎಸ್.ಸಿ.ಸಿ.ಯಿಂದ ‘ದುಬೈ ಫಿಟ್ನೆಸ್ ಚಾಲೆಂಜ್ – 2019’ ಅಭಿಯಾನಕ್ಕೆ ಚಾಲನೆ

Update: 2019-10-19 04:22 GMT

ದುಬೈ, ಅ.19:  ‘ದುಬೈ ಫಿಟ್ನೆಸ್ ಚಾಲೆಂಜ್ – 2019’  30x30 ಅಭಿಯಾನದ ಅಂಗವಾಗಿ ಕರ್ನಾಟಕ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್(ಕೆ.ಎಸ್.ಸಿ.ಸಿ.) ನ (ನೋಂದಾಯಿತ ದುಬೈ ಸರಕಾರದ ಕಮ್ಯುನಿಟಿ ಡೆವಲಪ್ ಮೆಂಟ್ ಅಥಾರಿಟಿ) ಮೊದಲ ಕಾರ್ಯಕ್ರಮ ಅ.18ರಂದು ಮುಂಜಾನೆ ದುಬೈಯ ಅಲ್ ಮಮ್ ಝರ್ ಬೀಚ್ ನಲ್ಲಿ ನಡೆಯಿತು.

ದುಬೈ ಯುವರಾಜ ಮತ್ತು ಸರಕಾರದ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಶೇಕ್ ಹಮ್ದಾನ್ ಬಿನ್ ಮುಹಮ್ಮದ್ ಬಿನ್ ರಾಶಿದ್ ಅಲ್ ಮಕ್ತೂಮ್ ಮುಂದಾಳುತ್ವದಲ್ಲಿ ಆರಂಭಗೊಂಡ 30 ದಿನಗಳ ಕನಿಷ್ಠ 30 ನಿಮಿಷಗಳ ದೈಹಿಕ ಚಟುವಟಿಕೆಯಲ್ಲಿ ಭಾಗವಹಿಸಿ ದೈಹಿಕ ಕ್ಷಮತೆ ಹೆಚ್ಚಿಸಿಕೊಳ್ಳಲು ಪ್ರೋತ್ಸಾಹಿಸುವ ಸವಾಲಿನಂತೆ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕರ್ನಾಟಕ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್ ಅಧ್ಯಕ್ಷ ಮುಹಮ್ಮದ್ ಇಸ್ಮಾಯೀಲ್ ಅಬ್ದುರ್ರಝಾಕ್ ಮಾತನಾಡಿ, ಒಂದು ತಿಂಗಳ ಈ ಅಭಿಯಾನದಿಂದ ಪ್ರೇರಿತರಾಗಿ ನಿರಂತರವಾಗಿ ವ್ಯಾಯಾಮವನ್ನು ರೂಢಿಸಿಕೊಳ್ಳಲು ಕರೆ ನೀಡಿದರು.

 ಸುಮಾರು 200ರಷ್ಟು ಮಂದಿ ದುಬೈ ‘ಫಿಟ್ನೆಸ್ ಚಾಲೆಂಜ್ 2019’ ಕಾರ್ಯಕ್ರಮದಲ್ಲಿ ಭಾಗವಹಿಸಿ, ಯೋಗ, ಜಾಗಿಂಗ್ ಮತ್ತು ವ್ಯಾಯಾಮ ಮಾಡಿದರು. 

ಕ್ಲಬ್ ನ ಉಪಾಧ್ಯಕ್ಷ ಝಿಯಾವುದ್ದೀನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಂಚಾಲಕ ಮುಹಮ್ಮದ್ ಶಫಿ ಉಪಸ್ಥಿತರಿದ್ದರು.

ಅಭಿಯಾನದ ಉಳಿದ ಕಾರ್ಯಕ್ರಮಗಳು ಅಲ್ ಮಮ್ ಝರ್ ಬೀಚ್ ನಲ್ಲೇ ಅ.25, ನವೆಂಬರ್ 1 ಹಾಗೂ 8ರಂದು ನಡೆಯಲಿದೆ. ನವೆಂಬರ್ 15ರಂದು ಅಭಿಯಾನ ಸಮಾಪನಗೊಳ್ಳಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News