ಭಾರತ ಹಾಕಿ ತಂಡಕ್ಕೆ ಮನ್‌ಪ್ರೀತ್, ರಾಣಿ ಸಾರಥ್ಯ

Update: 2019-10-19 05:30 GMT

ಹೊಸದಿಲ್ಲಿ, ಅ.18: ಮುಂಬರುವ ಎಫ್‌ಐಎಚ್ ಹಾಕಿ ಒಲಿಂಪಿಕ್ಸ್ ಕ್ವಾಲಿಫೈಯರ್ಸ್‌ಗೆ ಹಾಕಿ ಇಂಡಿಯಾ ಪುರುಷರ ಹಾಕಿ ತಂಡದ ಜೊತೆಗೆ ರಾಣಿ ರಾಂಪಾಲ್ ನೇತೃತ್ವದ ಯಾವುದೇ ಬದಲಾವಣೆಯಿಲ್ಲದ ಮಹಿಳಾ ತಂಡವನ್ನು ಶುಕ್ರವಾರ ಪ್ರಕಟಿಸಿದೆ. 18 ಸದಸ್ಯರನ್ನು ಒಳಗೊಂಡ ಪುರುಷರ ಹಾಕಿ ತಂಡವನ್ನು ಮನ್‌ಪ್ರೀತ್ ಸಿಂಗ್ ನಾಯಕನಾಗಿಯೂ ಹಾಗೂ ಕನ್ನಡಿಗ ಎಸ್.ವಿ.ಸುನೀಲ್ ಉಪ ನಾಯಕನಾಗಿ ಮುನ್ನಡೆಸಲಿದ್ದಾರೆ. ಮಹಿಳಾ ತಂಡದಲ್ಲಿ ಉಪ ನಾಯಕಿ ಗೋಲ್‌ಕೀಪರ್ ಸವಿತಾ ಉಪ ನಾಯಕಿಯಾಗಿರುತ್ತಾರೆ.

ಉಭಯ ತಂಡಗಳು ಒಡಿಶಾದಲ್ಲಿ ನಡೆಯಲಿರುವ ಎರಡು ಹಂತದ ಎಫ್‌ಐಎಚ್ ಹಾಕಿ ಒಲಿಂಪಿಕ್ಸ್ ಕ್ವಾಲಿಫೈಯರ್‌ನಲ್ಲಿ ಆಡಲಿವೆ. ವಿಶ್ವದ ನಂ.5ನೇ ತಂಡ ಭಾರತದ ಪುರುಷರ ತಂಡ ವಿಶ್ವದ ನಂ.22ನೇ ತಂಡ ರಶ್ಯ, ವಿಶ್ವದ ನಂ.9ನೇ ಭಾರತದ ಮಹಿಳಾ ತಂಡ ವಿಶ್ವದ ನಂ.13ನೆ ತಂಡ ಅಮೆರಿಕವನ್ನು ಎದುರಿಸಲಿದೆ. ಪುರುಷರ ತಂಡದಲ್ಲಿ ಇಬ್ಬರು ವಿಕೆಟ್‌ಕೀಪರ್‌ಗಳಾದ ಪಿ.ಆರ್.ಶ್ರೀಜೇಶ್ ಹಾಗೂ ಕೃಷ್ಣಬಹದ್ದೂರ್ ಪಾಠಕ್ ಇದ್ದಾರೆ.ನಾಯಕ ಮನ್‌ಪ್ರೀತ್ ಫಾರ್ವರ್ಡ್ ವಿಭಾಗವನ್ನು ಮುನ್ನಡೆಸಲಿದ್ದಾರೆ.

ಈ ಪಂದ್ಯದಲ್ಲಿ ಜಯ ಸಾಧಿಸುವ ತಂಡ 2020ರ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಅರ್ಹತೆ ಪಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News