ಅ.25: ಎಸ್.ಕೆ.ಕರೀಂಖಾನ್ ನೆನಪಿನಲ್ಲಿ ಜನಪದ ಗೀತೆಗಳ ಗಾಯನ ಸ್ಪರ್ಧೆ

Update: 2019-10-19 17:14 GMT

ಬೆಂಗಳೂರು, ಅ. 19: ಕನ್ನಡ ಸಂಘರ್ಷ ಸಮಿತಿ ಜಾನಪದ ಜಂಗಮ ಎಸ್.ಕೆ. ಕರೀಂಖಾನ್ ನೆನಪಿನಲ್ಲಿ ಲೇರಿನಾ ಜಾಕೊಬ್ ಲೋಬೊ ದತ್ತಿ ಅಂಗವಾಗಿ ಜಯನಗರ ಸರಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ಸಂಘದ ಆಶ್ರಯದಲ್ಲಿ ಉದಯೋನ್ಮುಖ ಗಾಯಕರಿಗಾಗಿ ರಾಜ್ಯ ಮಟ್ಟದ ಜನಪದ ಗೀತೆಗಳ ಗಾಯನ ಸ್ಪರ್ಧೆ ಏರ್ಪಡಿಸಲಾಗಿದೆ.

ಅ.25ರ ಮಧ್ಯಾಹ್ನ 1 ಗಂಟೆಗೆ ಕಾಲೇಜಿನ ಸಭಾಂಗಣ, ಸರಕಾರಿ ಪ್ರಥಮದರ್ಜೆ ಕಾಲೇಜು, ಯಡಿಯೂರು, ಜಯನಗರ, ಬೆಂಗಳೂರು ಇಲ್ಲಿ ಸ್ಪರ್ಧೆ ನಡೆಯಲಿದ್ದು, ಸ್ಪರ್ಧೆಯು 12 ವರ್ಷದ ಒಳಗಿನವರು ಮಕ್ಕಳು, 13ರಿಂದ 20 ವರ್ಷದ ಒಳಗಿನವರು ಕಿರಿಯರ ವಿಭಾಗ, 20ವರ್ಷ ಮೀರಿದವರು ಹಿರಿಯರ ವಿಭಾಗದಲ್ಲಿ ಪಾಲ್ಗೊಳ್ಳಬಹುದು.

ವೇದಿಕೆಗಳಲ್ಲಿ ಕಾರ್ಯಕ್ರಮಗಳನ್ನು ನೀಡುವವರು, ದೂರದರ್ಶನ, ಆಕಾಶವಾಣಿ ಸೇರಿ ಇನ್ನಿತರ ವಾಹಿನಿಗಳಲ್ಲಿ ಹಾಡಿರುವವರು ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ. ಮೂಲ ಜಾನಪದ ಗೀತೆಗಳನ್ನು ಮಾತ್ರ ಸ್ಪರ್ಧೆಯಲ್ಲಿ ಹಾಡಬೇಕು. ಯಾವುದೇ ಪಕ್ಕವಾದ್ಯ ಬಳಸುವಂತಿಲ್ಲ.

ಪ್ರವೇಶ ಶುಲ್ಕ ಒಬ್ಬರಿಗೆ 50 ರೂ. ಮಕ್ಕಳ ಮತ್ತು ಕಿರಿಯರ ವಿಭಾಗದಲ್ಲಿ ಭಾಗವಹಿಸುವವರು ವಯಸ್ಸಿನ ದೃಢೀಕರಣಕ್ಕಾಗಿ ಶಾಲಾ ದಾಖಲಾತಿ ಒದಗಿಸಬೇಕು. ಮೂರೂ ವಿಭಾಗದಲ್ಲಿ ಪ್ರತ್ಯೇಕವಾಗಿ 3ನಗದು ಬಹುಮಾನಗಳನ್ನು ನೀಡಲಾಗುವುದು. ಮೊದಲ ಬಹುಮಾನ 1 ಸಾವಿರ ರೂ., 2ನೆ ಬಹುಮಾನ 750 ರೂ., 3ನೆ ಬಹುಮಾನ 500 ರೂ.ಹೆಚ್ಚು ಮಂದಿ ಭಾಗವಹಿಸಿ ಉತ್ತಮವಾಗಿ ಹಾಡಿದರೆ ಉತ್ತೇಜಕ ಬಹುಮಾನಗಳಿರುತ್ತವೆ. ತೀರ್ಪುಗಾರರ ತೀರ್ಮಾನವೇ ಅಂತಿಮ.

ಹೆಸರು ನೋಂದಣಿಗೆ ಡಾ.ಕೋ.ವೆಂ.ರಾಮಕೃಷ್ಣೇಗೌಡ, ಅಧ್ಯಕ್ಷರು, ಕನ್ನಡ ಸಂಘರ್ಷ ಸಮಿತಿ ಇವರನ್ನು ಮೊ.ಸಂಖ್ಯೆ-94488 51781ನ್ನು ಸಂಪರ್ಕಿಸಬಹುದು. ಮುಂಚಿತವಾಗಿ ಬಂದು ಸ್ಪರ್ಧೆಯ ದಿನ ಸ್ಥಳದಲ್ಲೂ ಹೆಸರು ನೋಂದಾಯಿಸಬಹುದು. ಸ್ಪರ್ಧೆ ಪ್ರಾರಂಭವಾದ ಬಳಿಕ ಹೆಸರು ನೋಂದಾಯಿಸಿಕೊಳ್ಳುವುದಿಲ್ಲ.

ಸ್ಪರ್ಧೆಯ ವಿಜೇತರಿಗೆ ಅ.31ಕ್ಕೆ ಕಸಾಪ ಸಭಾಂಗಣದಲ್ಲಿ ನಡೆಯಲಿರುವ ಕನ್ನಡ ಸಂಘರ್ಷ ಸಮಿತಿ 40ನೆ ಸಂಸ್ಥಾಪನಾ ದಿನಾಚರಣೆಯಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಸಮಿತಿ ಅಧ್ಯಕ್ಷ ಡಾ.ಕೋ.ವೆಂ.ರಾಮಕೃಷ್ಣೇಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News