200ಕ್ಕೂ ಅಧಿಕ ರೌಡಿಗಳ ಪರೇಡ್: ಅಪರಾಧ ಚಟುವಟಿಗಳಲ್ಲಿ ಭಾಗಿಯಾಗದಂತೆ ಪೊಲೀಸರ ಎಚ್ಚರಿಕೆ

Update: 2019-10-19 17:52 GMT

ಬೆಂಗಳೂರು, ಅ.19: ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನಗರದ ಈಶಾನ್ಯ ವಿಭಾಗದ 200ಕ್ಕೂ ಅಧಿಕ ರೌಡಿಗಳ ಪರೇಡ್ ನಡೆಸಲಾಯಿತು.

ಶನಿವಾರ ಇಲ್ಲಿನ ಯಲಹಂಕ ಹೊಯ್ಸಳ ಮೈದಾನದಲ್ಲಿ 11 ಠಾಣಾ ವ್ಯಾಪ್ತಿಗಳಿರುವ ರೌಡಿಗಳನ್ನು ಕರೆದು, ಅಪರಾಧ ಚಟುವಟಿಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಲಾಯಿತು.

ಪರೇಡ್‌ ಉದ್ದೇಶಿಸಿ ಮಾತನಾಡಿದ ಈಶಾನ್ಯ ವಿಭಾಗದ ಡಿಸಿಪಿ ಡಾ.ಭೀಮಾಶಂಕರ್ ಗುಳೇದ್, ಹಬ್ಬ ಸೇರಿ ಇತರೆ ಸಂದರ್ಭದಲ್ಲಿ ಸಮಾಜದಲ್ಲಿನ ಶಾಂತಿ ಕದಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ರೌಡಿಶೀಟರ್‌ನಲ್ಲಿರುವ ನೀವು ಪೊಲೀಸರ ಮಾರ್ಗದರ್ಶನದಂತೆ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ರೌಡಿಶೀಟರ್‌ಗಳು ತಮ್ಮ ಮನಸ್ಸನ್ನು ಬದಲಾವಣೆ ಮಾಡಿಕೊಂಡು ಒಳ್ಳೆಯ ನಡವಳಿಕೆ ಪ್ರದರ್ಶನ ಮಾಡಿದ್ದಲ್ಲಿ ಅಂತಹವರನ್ನು ಗುರುತಿಸಿ ರೌಡಿಶೀಟರ್ ಪಟ್ಟಿಯಿಂದ ತೆಗೆದು ಹಾಕಲಾಗುವುದು. ಆದರೆ, ಪದೇ ಪದೇ ಅಪರಾಧ ಪ್ರಕರಣದಲ್ಲಿ ಭಾಗಿಯಾದವರನ್ನು ರೌಡಿಶೀಟರ್ ಮುಂದುವರೆಸಲಾಗುವುದು ಎಂದು ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News