ಸಚಿನ್, ಸೆಹ್ವಾಗ್, ಗೇಲ್ ನಂತರ ರೋಹಿತ್: ಹೊಸ ದಾಖಲೆ ಬರೆದ 'ಹಿಟ್ ಮ್ಯಾನ್'!

Update: 2019-10-20 07:52 GMT

ಹೊಸದಿಲ್ಲಿ, ಅ.20: ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ನಲ್ಲಿ ದ್ವಿಶತಕ ಸಿಡಿಸಿದ 4ನೆ ಬ್ಯಾಟ್ಸ್ ಮ್ಯಾನ್ ಆಗಿ ರೋಹಿತ್ ಶರ್ಮಾ ಹೊರಹೊಮ್ಮಿದ್ದಾರೆ. ಇಂದು ರಾಂಚಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ರೋಹಿತ್ ದ್ವಿಶತಕ ಸಿಡಿಸಿದರು.

ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ದ್ವಿಶತಕ ಸಿಡಿಸಿರುವವರ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್ ಮತ್ತು ಕ್ರಿಸ್ ಗೇಲ್ ಇದ್ದಾರೆ. ಏಕದಿನ ಕ್ರಿಕೆಟ್ ನಲ್ಲಿ ರೋಹಿತ್ 3 ದ್ವಿಶತಕಗಳನ್ನು ಸಿಡಿಸಿದ್ದಾರೆ ಮತ್ತು ಏಕದಿನ ಕ್ರಿಕೆಟ್ ನಲ್ಲಿ ವೈಯಕ್ತಿಕ ಅತೀ ಹೆಚ್ಚು ರನ್ ಗಳಿಸಿದ (264) ದಾಖಲೆಯೂ ಅವರ ಹೆಸರಿನಲ್ಲಿದೆ .

ಇಂದಿನ ಪಂದ್ಯದಲ್ಲಿ 249 ಎಸೆತಗಳನ್ನು ಎದುರಿಸಿದ ರೋಹಿತ್ 200 ರನ್ ಗಳಿಸಿದರು. ಇದರಲ್ಲಿ 28 ಬೌಂಡರಿಗಳು ಮತ್ತು 4 ಸಿಕ್ಸರ್ ಗಳು ಸೇರಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News