ಐಎಎಫ್ ಅಧಿಕಾರಿಯ ತಂದೆಗೆ ಥಳಿಸಿ ಮಲ ತಿನ್ನಿಸಿದ ದುಷ್ಕರ್ಮಿಗಳು

Update: 2019-10-20 15:58 GMT

  ರಾಯ್‌ಪುರ, ಅ.20: ಭಾರತೀಯ ವಾಯುಪಡೆಯ ಅಧಿಕಾರಿ ಪ್ರೀತಿಸುತ್ತಿದ್ದ ಯುವತಿಯನ್ನು ಆಕೆಯ ಕುಟುಂಬದ ವಿರೋಧದ ಮಧ್ಯೆಯೂ ವಿವಾಹವಾದ ಸಿಟ್ಟಿನಲ್ಲಿ ಯುವತಿಯ ಮನೆಯವರು ಅಧಿಕಾರಿಯ ತಂದೆಯನ್ನು ಥಳಿಸಿ, ಅವರ ಮೇಲೆ ಮೂತ್ರಮಾಡಿ ಮಲತಿನ್ನಿಸಿದ ಹೇಯ ಘಟನೆ ಛತ್ತೀಸ್‌ಗಢದಲ್ಲಿ ನಡೆದಿದೆ.

ಪ್ರೀತಿಸುತ್ತಿದ್ದ ಇವರಿಬ್ಬರು ಯುವತಿಯ ತಂದೆಗೆ ತಿಳಿಸದೆ ಆರ್ಯಸಮಾಜದಲ್ಲಿ ವಿವಾಹವಾಗಿದ್ದಾರೆ. ಇದರ ಮಾಹಿತಿ ತಿಳಿಯುತ್ತಿದ್ದಂತೆಯೇ ವಧುವಿನ ತಂದೆ ಹಾಗೂ ಮನೆಯವರು ಕ್ರೋಧಗೊಂಡಿದ್ದು ವರನನ್ನು (ವಾಯುಪಡೆಯ ಅಧಿಕಾರಿ) ಎಲ್ಲೆಡೆ ಹುಡುಕಿದ್ದಾರೆ. ಆಗ ಕಾರಿನಲ್ಲಿ ಅದೇ ದಾರಿಯಲ್ಲಿ ಪ್ರಯಾಣಿಸುತ್ತಿದ್ದ ವರನ ತಂದೆಯನ್ನು ಗಮನಿಸಿ, ಅವರನ್ನು ಕಾರಿನಿಂದ ಹೊರಗೆಳೆದು ಮಾರಣಾಂತಿಕವಾಗಿ ಥಳಿಸಿದ್ದಾರೆ. ಜೊತೆಗೆ ಮುಖಕ್ಕೆ ಮಸಿ ಬಳಿದು ಮೂತ್ರ ಮಾಡಿದ್ದು ಮನುಷ್ಯನ ಮಲವನ್ನು ಬಾಯಿಯೊಳಗೆ ತುರುಕಿಸಿದ್ದಾರೆ ಎಂದು ವರನ ತಂದೆ ದೂರು ನೀಡಿದ್ದಾರೆ.

ಪೊಲೀಸರಿಗೆ ದೂರು ನೀಡಿದರೆ ಪರಿಣಾಮ ನೆಟ್ಟಗಿರದು. 24 ಗಂಟೆಯೊಳಗೆ ಮಗಳನ್ನು ಪೋಷಕರಿಗೆ ಮರಳಿಸಬೇಕು ಎಂದು ಎಚ್ಚರಿಕೆ ನೀಡಿ ತೆರಳಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಇದುವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News