ಅಬುದಾಭಿಯಲ್ಲಿ 8 ಸಾವಿರ ವರ್ಷ ಪುರಾತನ ಹರಳು ಪ್ರದರ್ಶನ

Update: 2019-10-20 17:06 GMT

ಅಬುದಾಭಿ,ಅ.20: ಸುಮಾರು 8 ಸಾವಿರ ವರ್ಷಗಳಷ್ಟು ಪುರಾತನವಾದ ನೈಸರ್ಗಿಕ ಹರಳೊಂದನ್ನು ಅಬುದಾಭಿಯಲ್ಲಿ ಪ್ರದರ್ಶನಕ್ಕಿಡಲಾಗುವುದೆಂದು ಅಧಿಕೃತ ಮೂಲಗಳು ತಿಳಿಸಿವೆ. ನೂತನ ಶಿಲಾಯುಗದ ಕಾಲದಲ್ಲೂ ವಸ್ತುಗಳನ್ನು ವ್ಯಾಪಾರಕ್ಕಿಡಲಾಗುತ್ತಿತ್ತು ಎಂಬುದಕ್ಕೆ ಇದೊಂದು ಪುರಾವೆಯಾಗಿದೆಯೆಂದು ಅವು ಹೇಳಿವೆ.

ಅಬುದಾಭಿ ಸಮೀಪದ ಮಾರಾವಾಹ್ ದ್ವೀಪದಲ್ಲಿ ನಡೆದ ಉತ್ಖನನದ ವೇಳೆ ಪತ್ತೆಯಾದ ಅತ್ಯಂತ ಪ್ರಾಚೀನ ಕೊಠಡಿಯೊಂದರ ನೆಲದಲ್ಲಿ ಈ ನೈಸರ್ಗಿಕ ಹರಳು ಪತ್ತೆಯಾಗಿತ್ತು. ಈ ಹರಳು ನವಶಿಲಾಯುಗದ ಸಮಯವಾದ ಕ್ರಿ.ಪೂ.5800-5600ನೇ ಇಸವಿಯಷ್ಟು ಪುರಾತನವೆಂದು ಕಾರ್ಬನ್ ಪರೀಕ್ಷೆಯಿಂದ ಪತ್ತೆಯಾಗಿರುವುದಾಗಿ ಅಬುದಾಭಿಯ ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಇಲಾಖೆಯು ತಿಳಿಸಿದೆ.

ಮರಾವಾಹ್‌ನಲ್ಲಿ ನಡೆಸಲಾದ ಉತ್ಖನನದಲ್ಲಿ, ಪತನಗೊಂಡ ಸ್ಥಿತಿಯಲ್ಲಿದ್ದ ನವಶಿಲಾಯುಗದ ಹಲವಾರು ಕಲ್ಲಿನ ಸಂರಚನೆಗಳು ಪತ್ತೆಯಾಗಿದ್ದವು. ಚಿಪ್ಪು ಹಾಗೂ ಕಲ್ಲಿನಿಂದ ತಯಾರಿಸಲಾದ ಹಲವಾರು ಮಣಿಗಳು ಹಾಗೂ ಬಾಣದ ಅಲಗುಗಳು ಪತ್ತೆಯಾಗಿದ್ದವು.

ಅಕ್ಟೋಬರ್ 30ರಂದು ಅಬುದಾಭಿಯಲ್ಲಿ ಆರಂಭಗೊಳ್ಳಲಿರುವ ‘10 ಥೌಸಂಡ್ ಇಯರ್ಸ್‌ ಲಕ್ಸುರಿ’ ಎಂಬ ಹೆಸರಿನ ವಸ್ತುಪ್ರದರ್ಶಿನದಲ್ಲಿ ಈ ಹರಳು ಪ್ರದರ್ಶನಗೊಳ್ಳಲಿದೆ. ಪ್ಯಾರಿಸ್‌ನ ಪ್ರಸಿದ್ಧ ವಸ್ತುಸಂಗ್ರಾಹಲಯದ ಅಬುದಾಭಿ ಶಾಖೆಯಾದ ಲಾರ್ವೆ ಅಬುದಾಭಿಯಲ್ಲಿ ಈ ವಸ್ತುಪ್ರದರ್ಶನ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News