ಜೀವನದ ವಕ್ರದೃಷ್ಟಿಯಿಂದ ಹಾಸ್ಯ ಹುಟ್ಟುತ್ತದೆ: ಸಾಹಿತಿ ವೈ.ವಿ.ಗುಂಡೂರಾವ್

Update: 2019-10-20 18:20 GMT

ಬೆಂಗಳೂರು, ಅ.20: ಜೀವನವನ್ನು ವಕ್ರದೃಷ್ಟಿಯಿಂದ ನೋಡಿದರೆ ಹಾಸ್ಯ ಹುಟ್ಟುತ್ತದೆ. ಎಲ್ಲರ ಬದುಕಿನಲ್ಲೂ ಪ್ರತಿನಿತ್ಯ ವಕ್ರದೃಷ್ಟಿ ನಡೆಯುತ್ತಿರುತ್ತವೆ. ಅದನ್ನು ತಾಳ್ಮೆಯಿಂದ ಗ್ರಹಿಸುವ ಹಾಸ್ಯ ಕಲಾವಿದರು ಆ ಘಟನೆಗಳನ್ನು ಹಾಸ್ಯವಾಗಿ ಪರಿವರ್ತಿಸುತ್ತಾರೆ ಎಂದು ಸಾಹಿತಿ ವೈ.ವಿ.ಗುಂಡೂರಾವ್ ತಿಳಿಸಿದ್ದಾರೆ.

ರವಿವಾರ ಜಯನಗರ ನ್ಯಾಷನಲ್ ಕಾಲೇಜಿನ ಎಚ್.ಎನ್.ಸಭಾಂಗಣದಲ್ಲಿ ಆಯೋಜಿಸಿದ್ದ ಎಂಎಸ್‌ಎನ್ ಹಬ್ಬ ಹಾಗೂ ಹಾಸ್ಯೋಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಓದುವ ಹವ್ಯಾಸ ಕಡಿಮೆಯಾಗಿರುವುದರಿಂದ ಹಾಸ್ಯ ಪ್ರಸಂಗಗಳು ಕಡೆಮೆಯಾಗಿವೆ ಎಂದರು.

ಹಾಸ್ಯ ಕಲಾವಿದ ಎಸ್.ಷಡಕ್ಷರಿ ಮಾತನಾಡಿ, ಚಿಕ್ಕಮಗಳೂರಿನಲ್ಲಿ ಜಮೀನ್ದಾರನೊಬ್ಬ ಅವರ ಊರಿನ ರುದ್ರಭೂಮಿಯನ್ನು ಸ್ವಚ್ಚಗೊಳಿಸಿ ಆಕರ್ಷಕವಾಗಿ ಕಾಣುವಂತೆ ಮಾಡಿದ್ದರು. ಆದರೆ, ಆ ಜಮೀನ್ದಾರನ ಬಳಿ ಕೆಲಸ ಮಾಡುತ್ತಿದ್ದ ಕಾರ್ಮಿಕ, ಅಯ್ಯೋ, ನಮ್ಮ ಮಾಲಕರು ಈ ರುದ್ರ ಭೂಮಿಗೆ ಲಕ್ಷಾಂತರ ರೂ.ಖರ್ಚು ಮಾಡಿದ್ದಾರೆ. ಆದರೆ, ಯಾರು ಜನರೇ ಬರಲ್ಲ ಎನ್ನುತ್ತಿದ್ದ ಎಂದು ಹೇಳುವ ಮೂಲಕ ನಗೆಯುಕ್ಕಿಸಿದರು.

ಅಡುಗೆ ಕಾರ್ಯಕ್ರಮಗಳನ್ನು ನಡೆಸಿಕೊಡುವ ಸಿಹಿಕಹಿ ಚಂದ್ರ, ಎಲ್ಲ ಕಡೆಯೂ ಪುಕ್ಕಟೆ ಊಟ ಸವಿಯುತ್ತಾರೆ. ಇನ್ನೂ ಅವರಿಗೆ ತಲೆಗೆ ಎಣ್ಣೆ ಆಗಲಿ, ಶಾಂಪೋ ಆಗಲಿ ಯಾವುದೂ ಬೇಡ. ಎಲ್ಲವು ಉಳಿತಾಯದ ಲೆಕ್ಕಾಚಾರವೇ ಎಂದು ಹಾಸ್ಯ ಚಟಾಕಿ ಹಾರಿಸಿದರು. ಈ ವೇಳೆ ಎಂ.ಎಸ್.ನರಹಿಂಹಮೂರ್ತಿ, ಹಾಸ್ಯ ಸಾಹಿತಿಗಳಾದ ಆ.ರಾ.ಮಿತ್ರ, ಎಂ.ಕೃಷ್ಣೇಗೌಡ, ಸಿಹಿಕಹಿ ಚಂದ್ರು, ಟಿ.ಎನ್.ಸೀತಾರಂ ಸೇರಿದಂತೆ ಹಲವು ಮಂದಿ ನೆರೆದಿದ್ದ ಸಭಿಕರಿಗೆ ಹಾಸ್ಯವನ್ನು ಉಣ ಬಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News