ಆಸ್ಟ್ರೇಲಿಯಾದಲ್ಲಿ ಗ್ಲೋಬಲ್ ಕ್ರೀಡಾಕೂಟ: ಭಾರತಕ್ಕೆ 4 ಕಂಚಿನ ಪದಕ

Update: 2019-10-21 14:33 GMT

ಬೆಂಗಳೂರು, ಅ.21: ಇತ್ತಿಚೆಗೆ ಆಸ್ಟ್ರೇಲಿಯಾದಲ್ಲಿ ನಡೆದ ಐ.ಎನ್.ಎ.ಎಸ್ ಗ್ಲೋಬಲ್ ಕ್ರೀಡಾಕೂಟದಲ್ಲಿ ಭಾರತ ತಂಡ ನಾಲ್ಕು ಪದಕಗಳನ್ನು ಗಳಿಸಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಜೆ.ಎ ಬೆಂಜಮಿನ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಐ.ಎನ್.ಎ.ಎಸ್. ಗ್ಲೋಬಲ್ ಕ್ರೀಡಾಕೂಟದಲ್ಲಿ 7 ಕ್ರೀಡಾಪಟುಗಳು ಭಾಗವಹಿಸಿದ್ದು, ನಾಲ್ಕು ಕಂಚಿನ ಪದಕಗಳನ್ನ ಪಡೆದಿದ್ದಾರೆ ಎಂದು ತಿಳಿಸಿದರು.

ಈ ಕ್ರೀಡಾಕೂಟದಲ್ಲಿ 55ಕ್ಕೂ ಹೆಚ್ಚು ದೇಶಗಳಿಂದ 100ಕ್ಕೂ ಹೆಚ್ಚಿನ ವಿಶ್ವಶ್ರೇಷ್ಠ ಕ್ರೀಡಾಪಟುಗಳು ಭಾಗವಹಿಸಿದ್ದರು. ಭಾರತವನ್ನು ಪ್ರತಿನಿಧಿಸಿದ ನಮ್ಮ ತಂಡವು ಕ್ರೀಡೆಗಳಲ್ಲಿ ನಾಲ್ಕು ಕಂಚಿನ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News