ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ ಕೆನಡಿ ಶಾಂತಕುಮಾರ್ ನೇಮಿಸಲು ಕ್ರೈಸ್ತ ಮುಖಂಡರ ಮನವಿ

Update: 2019-10-21 17:14 GMT

ಬೆಂಗಳೂರು, ಅ. 21: ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಅಥವಾ ಕ್ರೈಸ್ತ ಅಭಿವೃದ್ಧಿ ಮಂಡಳಿ(ಸಿಡಿಸಿ) ಅಧ್ಯಕ್ಷರನ್ನಾಗಿ ಜೆ.ಕೆನಡಿ ಶಾಂತಕುಮಾರ್ ಅವರನ್ನು ನೇಮಕ ಮಾಡಬೇಕೆಂದು ಕ್ರೈಸ್ತ ಮುಖಂಡರು ಹಾಗೂ ಧರ್ಮಗುರುಗಳ ನೇತೃತ್ವದ ನಿಯೋಗ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ಮಾಡಿದೆ.

ಕೆನಡಿ ಶಾಂತಕುಮಾರ್ ಅವರು ಸುಮಾರು 29 ವರ್ಷಗಳಿಂದ ಪಕ್ಷದ ಸಾಮಾನ್ಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಅಲ್ಪಸಂಖ್ಯಾತ ಮೋರ್ಚಾ ರಾಜ್ಯ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಕ್ರೈಸ್ತ ಸಮುದಾಯದ ಅಭಿವೃದ್ಧಿ ದೃಷ್ಟಿಯಿಂದ ಶಾಂತಕುಮಾರ್ ಅವರನ್ನು ನಿಗಮದ ಅಧ್ಯಕ್ಷರನ್ನಾಗಿ ನೇಮಿಸಬೇಕೆಂದು ಕೋರಿದರು.

ರಾಜ್ಯ ಕ್ರೈಸ್ತ ಸಮುದಾಯದ ಅಭಿವೃದ್ಧಿ ನಿಗಮವನ್ನು ಕೂಡಲೇ ಪ್ರಾರಂಭಿಸಬೇಕು. ಅಲ್ಲದೆ, ಈಗಾಗಲೇ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟಿರುವ ಅನುದಾನವನ್ನು ಕ್ರೈಸ್ತರ ಅಭಿವೃದ್ಧಿಗೆ ಸದ್ಬಳಕೆ ಮಾಡಬೇಕು. ಜತೆಗೆ ಮುಂದಿನ ಬಜೆಟ್‌ನಲ್ಲಿ ಕ್ರೈಸ್ತರಿಗೆ ಹೆಚ್ಚಿನ ಅನುದಾನ ಮೀಸಲಿಡಬೇಕೆಂದು ಆಗ್ರಹಿಸಿದರು.

ಈ ವೇಳೆ ರೆ.ಫಾ.ಪೋಸ್ಟಿನ್ ಲೋಬೊ, ರೆ.ಫಾ.ಜಾರ್ಜ್‌ ವಿನ್‌ಸೆಂಟ್ ಲೋಬೋ, ಡಿಎಸ್‌ಎಸ್ ಧರ್ಮಸಭೆ ನಿರ್ದೇಶಕ ರೆ.ಫಾ.ಅಂತೋಣಿ ಸ್ವಾಮಿ, ಮಾಜಿ ಶಾಸಕ ಮೈಕೆಲ್ ಫರ್ನಾಂಡಿಸ್, ಎಫ್‌ಟಿಆರ್ ಕೊಲ್ಯಾಸೊ, ಪ್ರೊ.ಕುಟೀನೋ, ಮೈಕೆಲ್ ರಾಜ್, ಪ್ರದೀಪ್, ಐಡಾ ಡಿಕುನ, ವಿಕ್ರಂ ಅಂತೋಣಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News