ಸಿಒಎ ಅಧಿಕಾರದ ಅವಧಿ ಇಂದು ಅಂತ್ಯ ಬಿಸಿಸಿಐ ಅಧ್ಯಕ್ಷ ಪದವಿಗೇರಲು ಗಂಗುಲಿ ಸಜ್ಜು

Update: 2019-10-23 02:38 GMT

ಮುಂಬೈ, ಅ.22: ಸುಪ್ರೀಂಕೋರ್ಟ್ ನಿಂದ ನೇಮಕ ಮಾಡಲ್ಪಟ್ಟಿರುವ ಆಡಳಿತಾಧಿಕಾರಿಗಳ ಸಮಿತಿಯ (ಸಿಒಎ)33 ತಿಂಗಳ ಅಧಿಕಾರದ ಅವಧಿ ಬುಧವಾರ ಅಂತ್ಯವಾಗಲಿದೆ. ಇದರ ಬೆನ್ನಿಗೇ ನಡೆಯಲಿರುವ ಬಿಸಿಸಿಐನ ವಾರ್ಷಿಕ ಮಹಾಸಭೆ(ಎಜಿಎಂ)ಯಲ್ಲಿ ಭಾರತದ ಓರ್ವ ಖ್ಯಾತ ನಾಯಕ ಸೌರವ್ ಗಂಗುಲಿ ಕ್ರಿಕೆಟ್ ಮಂಡಳಿಯ 39ನೇ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಳ್ಳಲಿದ್ದಾರೆ.

ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಗಂಗುಲಿ ಒಮ್ಮತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಪುತ್ರ ಜಯ್ ಶಾ ಕಾರ್ಯದರ್ಶಿಯಾಗಿ ಅವಿರೋಧ ಆಯ್ಕೆಯಾಗಿದ್ದಾರೆ. ಉತ್ತರಾಖಂಡದ ಮಹಿಮ್ ವರ್ಮಾ ನೂತನ ಉಪಾಧ್ಯಕ್ಷರಾಗಿಯೂ, ಬಿಸಿಸಿಐ ಮಾಜಿ ಅಧ್ಯಕ್ಷ ಹಾಗೂ ಹಾಲಿ ಕೇಂದ್ರ ವಿತ್ತ ಖಾತೆಯ ರಾಜ್ಯ ಸಚಿವ ಅನುರಾಗ್ ಠಾಕೂರ್ ಅವರ ಕಿರಿಯ ಸಹೋದರ ಅರುಣ್ ಧುಮಾಲ್ ಖಜಾಂಚಿಯಾಗಿಯೂ ಹಾಗೂ ಕೇರಳದ ಜಯೇಶ್ ಜಾರ್ಜ್ ಜೊತೆ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗಂಗುಲಿ ಅವರು ಬಿಸಿಸಿಐ ಅಧ್ಯಕ್ಷರಾಗಿ ಕೇವಲ 9 ತಿಂಗಳು ಕಾಲ ಕಾರ್ಯನಿರ್ವಹಿಸಲಿದ್ದಾರೆ. ನೂತನ ಕೂಲಿಂಗ್ ಆಫ್ ನಿಯಮದ ಪ್ರಕಾರ ಮುಂದಿನ ವರ್ಷದ ಜುಲೈನಲ್ಲಿ ಗಂಗುಲಿ ಅವರು ಬಿಸಿಸಿಐ ಹುದ್ದೆ ತೊರೆಯಬೇಕು. ಆರು ವರ್ಷಗಳ ಕಾಲ ಸತತವಾಗಿ ಪದಾಧಿಕಾರಿಯಾಗಿದ್ದವರು ಒಂದು ಅವಧಿಗೆ(3 ವರ್ಷ)ವಿರಾಮ ಪಡೆಯುವುದು ಕಡ್ಡಾಯ. ಗಂಗುಲಿ ಪ್ರಸ್ತುತ ಬಂಗಾಳ ಕ್ರಿಕೆಟ್ ಸಂಸ್ಥೆಯಲ್ಲಿ ಆರು ವರ್ಷಗಳಿಂದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಂಗಾಳ ಕ್ರಿಕೆಟ್ ಸಂಸ್ಥೆಯಲ್ಲಿ ಕಾರ್ಯದರ್ಶಿ ಹಾಗೂ ಅಧ್ಯಕ್ಷರಾಗಿ ಗಳಿಸಿರುವ ಅನುಭವ ಗಂಗುಲಿಗೆ ಬಿಸಿಸಿಐ ಅಧ್ಯಕ್ಷ ಸ್ಥಾನ ನಿಭಾಯಿಸಲು ನೆರವಾಗಬಹುದು.

ಗಂಗುಲಿ ಕೆಲವು ಗುರಿಯನ್ನು ನಿಗದಿಪಡಿಸಿದ್ದು, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಪುನರ್‌ನವೀಕರಿಸುವುದು ಇದರಲ್ಲಿ ಒಂದಾಗಿದೆ.

9 ತಿಂಗಳ ಅವಧಿಯಲ್ಲಿ ಗಂಗುಲಿ ತನ್ನ ಸಾಮರ್ಥ್ಯ ತೋರಿಸಬೇಕಾಗಿದೆ. ಭಾರತದ ಮಾಜಿ ನಾಯಕ ಅನರ್ಹಗೊಂಡಿರುವ ಎನ್.ಶ್ರೀನಿವಾಸನ್ ಹಾಗೂ ನಿರಂಜನ್ ಶಾರನ್ನು ಹೇಗೆ ನಿಭಾಯಿಸುತ್ತಾರೆಂದು ನೋಡಬೇಕಾಗಿದೆ. ಶ್ರೀನಿ ಹಾಗೂ ಶಾ ಮಕ್ಕಳು ಬಿಸಿಸಿಐನ ಭಾಗವಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News