'ಎಪಿ ಸಿಎಂ ಜಗನ್' ಕಾರು ವಶ!

Update: 2019-10-23 03:48 GMT

ಹೈದರಾಬಾದ್, ಅ.23: ಹಲವು ಮಂದಿ ಟ್ರಾಫಿಕ್ ಟಿಕೆಟ್ ಅಥವಾ ಪಾರ್ಕಿಂಗ್ ಶುಲ್ಕದಿಂದ ತಪ್ಪಿಸಿಕೊಳ್ಳುವ ಸಲುವಾಗಿ ತಮ್ಮ ವಾಹನಗಳಿಗೆ ಪೊಲೀಸ್, ಪ್ರೆಸ್, ಜಡ್ಜ್ ಅಥವಾ ಎಂಎಲ್‌ಎ ಎಂಬ ಸ್ಟಿಕ್ಕರ್ ಹಚ್ಚಿಕೊಳ್ಳುವುದು ಸಾಮಾನ್ಯ. ಆದರೆ ಹೈದರಾಬಾದ್ ನಿವಾಸಿಯೊಬ್ಬನ ಕಾರಿನ ನಂಬರ್‌ಪ್ಲೇಟ್ ನೋಡಿ ಪೊಲೀಸರೇ ದಂಗಾಗಿದ್ದಾರೆ!

'ಎಪಿ ಸಿಎಂ ಜಗನ್' ಹೆಸರಿನ ಫಲಕವನ್ನು ಕಾರಿನ ಮುಂಬದಿ ಹಾಗೂ ಹಿಂಬದಿಯಲ್ಲಿ ನಂಬರ್‌ಪ್ಲೇಟ್ ಜಾಗದಲ್ಲಿ ಅಳವಡಿಸಲಾಗಿತ್ತು. ಅದೂ ಸ್ಟಿಕ್ಕರ್ ಅಲ್ಲ; ಕಬ್ಬಿಣದ ಕಾಯಂ ಫಲಕ.

ಜೆಡಿಮೆಟ್ಲಾ ಎಂಬಲ್ಲಿ ವಾಹನಗಳನ್ನು ಸಂಚಾರ ಪೊಲೀಸರು ತಪಾಸಣೆ ಮಾಡುತ್ತಿದ್ದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಪೂರ್ವ ಗೋದಾವರಿ ಜಿಲ್ಲೆಯ ಎಂ.ಹರಿರಾಕೇಶ್ ಎಂಬಾತ ತನ್ನ ಕಾರಿಗೆ ಎಪಿ ಸಿಎಂ ಜಗನ್ ಎಂಬ ಫಲಕ ಹಾಕಿಕೊಂಡಿದ್ದು, ಆತನ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ತಾವೆಂದೂ ಟೋಲ್ ವಿನಾಯ್ತಿ ಕೇಳಿಲ್ಲ ಅಥವಾ ಸಂಚಾರಿ ಪೊಲೀಸರು ಕಾರನ್ನು ತಪಾಸಣೆ ಮಾಡದಂತೆ ವಿನಾಯ್ತಿ ಕೇಳಿಲ್ಲ ಎಂದು ರಾಕೇಶ್ ಸಮರ್ಥಿಸಿಕೊಂಡಿದ್ದಾರೆ.

ರಾಕೇಶ್ ವಿರುದ್ಧ ಪೊಲೀಸರು ವಂಚನೆ ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News