ಬೆಂಗಳೂರು ನಗರ ಯೋಜನಾ ಸಮಿತಿ: ಚುನಾವಣೆ ವೇಳಾಪಟ್ಟಿ ಪ್ರಕಟ
ಬೆಂಗಳೂರು, ಅ. 23: ಬೆಂಗಳೂರು ನಗರ ಜಿಲ್ಲಾ ಯೋಜನಾ ಸಮಿತಿ 2019ರ ಚುನಾವಣೆ ನಡೆಸಲು ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ನಾಮಪತ್ರಗಳನ್ನು ಅ.28ರಿಂದ ನವೆಂಬರ್ 11ರ ವರೆಗೆ ಬೆಳಗ್ಗೆ 11ರಿಂದ ಸಂಜೆ 4 ಗಂಟೆಯ ವರೆಗೆ ಸಲ್ಲಿಸಬಹುದು.
ನ.12ರಂದು ಪೂರ್ವಾಹ್ನ 11ಗಂಟೆಗೆ ನಾಮಪತ್ರಗಳನ್ನು ಪರಿಶೀಲಿಸಲಾಗುವುದು. ನ.13ರಿಂದ ನ.18ರ ಬೆಳಗ್ಗೆ 11 ರಿಂದ ಸಂಜೆ 4 ಗಂಟೆವರೆಗೆ ನಾಮಪತ್ರಗಳನ್ನು ಹಿಂತೆಗೆದುಕೊಳ್ಳಬಹುದು. ನ.20ರ ಬೆಳಗ್ಗೆ 11ರಿಂದ ಸಂಜೆ 4ಗಂಟೆ ವರೆಗೆ ಮತದಾನ ನಡೆಯುವುದು. ನ.20ರ ಸಂಜೆ 5 ಗಂಟೆಯಿಂದ ಮತಗಳ ಎಣಿಕೆ ಪ್ರಾರಂಭಿಸಲಾಗುವುದು. ಚುನಾವಣಾ ಪ್ರಕ್ರಿಯೆ ನ.21ರಂದು ಪೂರ್ಣಗೊಳ್ಳುವುದು ಎಂದು ಜಿಲ್ಲಾ ಯೋಜನಾ ಸಮಿತಿ ಚುನಾವಣೆಯ ಚುನಾವಣಾಧಿಕಾರಿಗಳು ಹಾಗೂ ಬೆಂಗಳೂರು ನಗರ ಜಿ.ಪಂ. ಸಿಇಓ ಕೆ.ಶಿವರಾಮೇಗೌಡ ತಿಳಿಸಿದ್ದಾರೆ.
ಹೆಚ್ಚಿನ ವಿವರಗಳಿಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಬೆಂಗಳೂರು ನಗರ ಜಿಲ್ಲಾ ಪಂಚಾಯತಿ ದೂರವಾಣಿ ಸಂಖ್ಯೆ: 080-2671 0100 ಅಥವಾ ಮೊಬೈಲ್ ಸಂಖ್ಯೆ 94805 2004 ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.