ವೇಶ್ಯಾವಾಟಿಕೆ ಆರೋಪ: ಮಹಿಳೆ ಸೇರಿ ಮೂವರ ಬಂಧನ

Update: 2019-10-24 12:16 GMT

ಬೆಂಗಳೂರು,ಅ.24: ವೇಶ್ಯಾವಾಟಿಕೆ ಆರೋಪದಡಿ ಮಹಿಳೆ ಸೇರಿ ಮೂವರನ್ನು ನಂದಿನಿಲೇಔಟ್ ಪೊಲೀಸರು ಬಂಧಿಸಿದ್ದಾರೆ.

ಮುನೇಶ್ವರ ಲೇಔಟ್‌ನ ಶಾಂತಮ್ಮ(50), ಜಯನಗರದ ಕೃಷ್ಣ(31) ಹಾಗೂ ಸರಸ್ವತಿಪುರದ ಹರ್ಷವರ್ಧನ್(21) ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತರಿಂದ ಮೂರು ಮೊಬೈಲ್, 900 ರೂ.ವನ್ನು ವಶಪಡಿಸಿಕೊಳ್ಳಲಾಗಿದೆ. ಮನೆಯಲ್ಲಿದ್ದ ಮೂವರು ಮಹಿಳೆಯರನ್ನು ರಕ್ಷಿಸಲಾಗಿದೆ. ಲಗ್ಗೆರೆಯ ಮುನೇಶ್ವರ ಬಡಾವಣೆಯ, ಮನೆಯೊಂದರಲ್ಲಿ ಆರೋಪಿ ಶಾಂತಮ್ಮ ಯುವತಿಯರನ್ನು ಕೂಡಿಹಾಕಿಕೊಂಡು ವೇಶ್ಯಾವಾಟಿಕೆ ವೃತ್ತಿಯಲ್ಲಿ ತೊಡಗಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News