ಬಾಂಗ್ಲಾ ತಂಡದಲ್ಲಿ ಸೈಫುದ್ದೀನ್ ಅಲಭ್ಯ

Update: 2019-10-24 18:09 GMT

ಢಾಕಾ, ಅ.24: ಬೆನ್ನುನೋವಿನಿಂದ ಬಳಲುತ್ತಿರುವ ಬಾಂಗ್ಲಾದೇಶದ ಆಲ್‌ರೌಂಡರ್ ಮುಹಮ್ಮದ್ ಸೈಫುದ್ದೀನ್ ಮುಂದಿನ ತಿಂಗಳು ಆರಂಭವಾಗಲಿರುವ ಭಾರತ ವಿರುದ್ಧದ ಟ್ವೆಂಟಿ-20 ಸರಣಿಯಿಂದ ಹೊರಗುಳಿದಿದ್ದಾರೆ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ(ಬಿಸಿಬಿ)ಗುರುವಾರ ತಿಳಿಸಿದೆ.

ಸೈಫುದ್ದೀನ್‌ಗೆ ಬೆನ್ನುನೋವು ಬೆನ್ನುಬಿಡದಂತೆ ಕಾಡುತ್ತಿದೆ. ಈ ಸಮಸ್ಯೆಯಿಂದಾಗಿಯೇ ಅವರು ಇತ್ತೀಚೆಗೆ ನಡೆದ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಪಂದ್ಯ ಸಹಿತ ಹಲವು ಪ್ರಮುಖ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು.

ಸೆಪ್ಟಂಬರ್‌ನಲ್ಲಿ ಅಫ್ಘಾನಿಸ್ತಾನ ಹಾಗೂ ಝಿಂಬಾಬ್ವೆ ವಿರುದ್ಧ ತ್ರಿಕೋನ ಸರಣಿ ಟೂರ್ನಿಗೆ ವಾಪಸಾಗುವ ಮೊದಲು ಶ್ರೀಲಂಕಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯಿಂದ ಹೊರಗುಳಿದಿದ್ದರು.

ಸೆ.24ರಂದು ತ್ರಿಕೋನ ಸರಣಿಯ ಫೈನಲ್ ಪಂದ್ಯ ಕೊನೆಗೊಂಡ ಬಳಿಕ ಸೈಫುದ್ದೀನ್ ಯಾವುದೇ ಪಂದ್ಯವನ್ನು ಆಡಿಲ್ಲ. ಹಲವು ಸ್ಕ್ಯಾನಿಂಗ್‌ನ ವರದಿಯಲ್ಲಿ ಅವರು ಚೇತರಿಸಿಕೊಳ್ಳಲು ಇನ್ನಷ್ಟು ಸಮಯದ ಅಗತ್ಯವಿದೆ ಎಂದು ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News