ಶಾಕೀಬ್‌ಗೆ ಕ್ರಿಕೆಟ್‌ನಿಂದ ಎರಡು ವರ್ಷಗಳ ನಿಷೇಧ ಹೇರಿದ ಐಸಿಸಿ

Update: 2019-10-29 16:40 GMT

ಢಾಕಾ, ಅ.29: ಎರಡು ವರ್ಷಗಳ ಹಿಂದೆ ಬುಕ್ಕಿ ತನ್ನನ್ನು ಸಂಪರ್ಕಿಸಿರುವುದನ್ನು ಮುಚ್ಚಿಟ್ಟ ಬಾಂಗ್ಲಾದೇಶ ಟೆಸ್ಟ್ ಹಾಗೂ ಟ್ವೆಂಟಿ-20 ಕ್ರಿಕೆಟ್ ತಂಡದ ನಾಯಕ, ಆಲ್‌ರೌಂಡರ್ ಶಾಕೀಬ್ ಅಲ್ ಹಸನ್ ಅವರನ್ನು ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ಎರಡು ವರ್ಷಗಳಿಗೆ ಅಮಾನತು ಮಾಡಲಾಗಿದ್ದು, ಎಲ್ಲ ಮಾದರಿಯ ಕ್ರಿಕೆಟ್ ಆಡುವುದಕ್ಕೆ ಅವರಿಗೆ ಐಸಿಸಿ ನಿಷೇಧ ವಿಧಿಸಿದೆ.

ಒಂದು ವರ್ಷ ಸಂಪೂರ್ಣ ನಿಷೇಧ ಮತ್ತು 12 ತಿಂಗಳ ಕಾಲ ಅಮಾನತು ಸಜೆ ವಿಧಿಸಲಾಗಿದೆ. ಐಸಿಸಿಯ ಸೂಚನೆಯ ಮೇರೆಗೆ ಬಾಂಗ್ಲಾದೇಶದ ಆಲ್ ರೌಂಡರ್ ಶಾಕೀಬ್ ಅಲ್ ಹಸನ್ ಅವರನ್ನು ಭಾರತ ಪ್ರವಾಸಕ್ಕೆ ತಯಾರಿಗಾಗಿ ಅಭ್ಯಾಸ ಶಿಬಿರದಿಂದ ದೂರವಿಡಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಭ್ರಷ್ಟ ವಿಧಾನವನ್ನು ವರದಿ ಮಾಡದ ಕಾರಣ ಶಾಕೀಬ್ ಅವರಿಗೆ ಐಸಿಸಿ ನಿಷೇಧ ಹೇರಿದೆ ಎಂದು ಬಾಂಗ್ಲಾದೇಶದ ಟೆಸ್ಟ್ ಕ್ರಿಕೆಟ್ ಮತ್ತು ಟ್ವೆಂಟಿ-20 ತಂಡದ ನಾಯಕನಾಗಿರುವ ಸ್ಟಾರ್ ಆಲ್‌ರೌಂಡರ್ ಶಾಕೀಬ್ ಅವರಿಗೆ ಭಾರತ ವಿರುದ್ಧ ಟೆಸ್ಟ್ ಚಾಂಪಿಯನ್‌ಶಿಪ್‌ನ ಮೊದಲ ಟೆಸ್ಟ್ ಸರಣಿಯನ್ನು ಆಡುವ ಅವಕಾಶದಿಂದ ವಂಚಿತಗೊಂಡಿದ್ದಾರೆ.

32ರ ಹರೆಯದ ಶಾಕೀಬ್ ಮುಂದಿನ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್, ಆಸ್ಟ್ರೇಲಿಯದಲ್ಲಿ ಅ.18ರಿಂದ ನ.15ರ ತನಕ ನಡೆಯಲಿರುವ ಟ್ವೆಂಟಿ-20 ಕ್ರಿಕೆಟ್‌ನಿಂದ ಆಡುವ ಅವಕಾಶ ಕಳೆಕೊಂಡಿದ್ದಾರೆ.

ಶಾಕೀಬ್ ಅಲ್ ಹಸನ್ ಮೂರು ಮಾದರಿಯ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ 11 ಸಾವಿರ ರನ್ ಮತ್ತು 500 ವಿಕೆಟ್ ಪಡೆದಿದ್ದಾರೆ. ಭಾರತದ ವಿರುದ್ಧ ಮೂರು ಟ್ವೆಂಟಿ-20 ಅಂತರ್ ರಾಷ್ಟ್ರೀಯ ಮತ್ತು ಎರಡು ಟೆಸ್ಟ್ ಗಳನ್ನು ಒಳಗೊಂಡಿರುವ ಬಾಂಗ್ಲಾ ಪ್ರವಾಸ ಸರಣಿ ನವೆಂಬರ್ 3 ರಿಂದ ಪ್ರಾರಂಭವಾಗಲಿದೆ. ಐಸಿಸಿಯ ಸೂಚನೆಯ ಮೇರೆಗೆ ಶಾಕೀಬ್ ಅವರನ್ನು ಬಿಸಿಬಿ ಅಭ್ಯಾಸದಿಂದ ದೂರವಿರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News