ಮಧ್ಯಂತರ ಚುನಾವಣೆ ಯತ್ನವನ್ನು ಇನ್ನೊಮ್ಮೆ ತಿರಸ್ಕರಿಸಿದ ಬ್ರಿಟನ್ ಸಂಸತ್

Update: 2019-10-29 14:47 GMT

ಲಂಡನ್, ಅ. 29: ಬ್ರಿಟನ್‌ನಲ್ಲಿ ಮಧ್ಯಂತರ ಚುನಾವಣೆಯನ್ನು ಹೇರುವ ಪ್ರಧಾನಿ ಬೊರಿಸ್ ಜಾನ್ಸನ್‌ರ ಇನ್ನೊಂದು ಪ್ರಯತ್ನವನ್ನು ಸಂಸದರು ಸೋಮವಾರ ವಿಫಲಗೊಳಿಸಿದರು. ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರುವ ಗಡುವನ್ನು ಇನ್ನೂ ಮೂರು ತಿಂಗಳು ವಿಸ್ತರಿಸಲು ಐರೋಪ್ಯ ಒಕ್ಕೂಟ ಒಪ್ಪಿಗೆ ನೀಡಿದ ಗಂಟೆಗಳ ಬಳಿಕ ಈ ಬೆಳವಣಿಗೆ ಸಂಭವಿಸಿತು.

ಆದರೆ, ಇದರಿಂದ ಹಿಂಜರಿಯದ ಜಾನ್ಸನ್, ಮಧ್ಯಂತರ ಚುನಾವಣೆಯನ್ನು ನಡೆಸುವ ಪರ್ಯಾಯ ಯೋಜನೆಯೊಂದನ್ನು ತಕ್ಷಣ ಘೋಷಿಸಿದರು. ಅವರ ಈ ಯೋಜನೆ ಯಶಸ್ವಿಯಾದರೆ ಡಿಸೆಂಬರ್ ಆದಿ ಭಾಗದಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ.

ಅವರ ಹೊಸ ಯೋಜನೆಯ ಪ್ರಕಾರ, ಹೊಸ ಒಪ್ಪಂದವೊಂದರ ಮೂಲಕ ಸಂಸದರ ಮನವೊಲಿಸಲು ಸಾಧ್ಯವಾದರೆ ಡಿಸೆಂಬರ್ 12ರಂದು ಚುನಾವಣೆ ನಡೆಯಬಹುದಾಗಿದೆ.

ಇದಕ್ಕೂ ಮೊದಲು, ಸೋಮವಾರ ರಾತ್ರಿ ಅವರು ಮಂಡಿಸಿದ ಮಧ್ಯಂತರ ಚುನಾವಣೆಯ ನಿರ್ಣಯವನ್ನು 650 ಸದಸ್ಯ ಬಲದ ಹೌಸ್ ಆಫ್ ಕಾಮನ್ಸ್ ತಿರಸ್ಕರಿಸಿತು. ಈ ನಿರ್ಣಯ ಅಂಗೀಕಾರಕೊಳ್ಳಬೇಕಾದರೆ, ಮೂರನೇ ಎರಡು ಭಾಗದಷ್ಟು ಸದಸ್ಯರು ಅದರ ಪರವಾಗಿ ಮತ ಹಾಕಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News