ಗುಂಡಾ ಕಾಯ್ದೆಯಡಿ 111 ನಟೋರಿಯಸ್ ರೌಡಿಗಳ ಬಂಧನ: ಭಾಸ್ಕರ್ ರಾವ್
Update: 2019-10-30 23:29 IST
ಬೆಂಗಳೂರು, ಅ.30: ನಗರದಲ್ಲಿರುವ ಎಲ್ಲ ರೌಡಿಗಳ ಪೈಕಿ 111 ಮಂದಿ ಅತ್ಯಂತ ನಟೋರಿಯಸ್(ಸಮಾಜ ಘಾತುಕ) ರೌಡಿಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಇವರನ್ನು ಗೂಂಡ ಕಾಯ್ದೆ ಅನ್ವಯ ಬಂಧಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಟೋರಿಯಸ್ 111 ರೌಡಿಗಳು ನಗರದ ವಿವಿಧ ವ್ಯಾಪ್ತಿಗಳಲ್ಲಿ ವಾಸವಾಗಿದ್ದಾರೆ. ಆಯಾ ಪೊಲೀಸ್ ಠಾಣೆ ವ್ಯಾಪ್ತಿಯ ಡಿಸಿಪಿಗಳಿಗೆ ಈ ರೌಡಿಗಳ ವಿವರ ನೀಡಿದ್ದು, ಕೂಡಲೇ ಬಂಧಿಸಲು ಸೂಚಿಸಲಾಗಿದೆ ಎಂದರು. ಡಿಕೆಶಿ ಅವರ ರೋಡ್‌ಶೋ ವೇಳೆ ಉಂಟಾದ ಘಟನೆಗಳ ಬಗ್ಗೆ ಎರಡು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.