ಕೋಣಿ ವಾಸುದೇವ ಶೇಟ್

Update: 2019-10-31 16:33 GMT

ಉಡುಪಿ, ಅ.31: ಉಡುಪಿ ಖ್ಯಾತ ಸ್ವರ್ಣೋದ್ಯಮಿಗಳಲ್ಲಿ ಒಬ್ಬರಾದ ಕೋಣಿ ವಾಸುದೇವ ಶೇಟ್ ಅವರು ಅಲ್ಪಕಾಲದ ಅಸೌಖ್ಯದ ಬಳಿಕ ಗುರುವಾರ ಬೆಳಗಿನ ಜಾವ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 77 ವರ್ಷ ಪ್ರಾಯವಾಗಿತ್ತು.

ಉಡುಪಿ ರಥಬೀದಿಯ ಕೆ.ವಾಸುದೇವ ಶೇಟ್ ಜ್ಯುವೆಲ್ಲರ್ಸ್‌ನ ಮಾಲಕ ರಾಗಿದ್ದ ಇವರು ಚಿನ್ನದ ಆಭರಣಗಳ ವ್ಯವಹಾರ ಕ್ಷೇತ್ರದಲ್ಲಿ ಹೆಸರುವಾಸಿಯಾ ಗಿದ್ದರು. ಇವರು ಪತ್ನಿ, ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಸಂತಾಪ: ಕೋಣಿ ವಾಸುದೇವ ಶೇಟ್ ಇವರ ನಿಧನಕ್ಕೆ ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಅಲ್ಲದೇ ಅವರು ಸದಸ್ಯರಾಗಿರುವ ವಿದ್ಯೋದಯ ಟ್ರಸ್ಟ್‌ನ ಸವರ್ ಸದಸ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ