ನಿವೇಶನದ ನೆಪದಲ್ಲಿ ವಂಚನೆ ಆರೋಪ: ವ್ಯವಸ್ಥಾಪಕ ನಿರ್ದೇಶಕ ಬಂಧನ

Update: 2019-11-01 16:32 GMT

ಬೆಂಗಳೂರು, ನ.1: ಖಾಲಿ ನಿವೇಶನ ಹೆಸರಿನಲ್ಲಿ ಹಣ ವಸೂಲಿ ಮಾಡಿ, ವಂಚಿಸಿದ ಆರೋಪದಡಿ ಪ್ರತಿಷ್ಠಿತ ಸಮೂಹ ಸಂಸ್ಥೆಯೊಂದರ ವ್ಯವಸ್ಥಾಪಕ ನಿರ್ದೇಶಕನನ್ನು ಬಸವೇಶ್ವರನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ನಗರದ ನಿವಾಸಿ ನಂಜುಂಡೇಗೌಡ ಎಂಬಾತ ಬಂಧಿತ ವ್ಯವಸ್ಥಾಪಕ ನಿರ್ದೇಶಕ ಎಂದು ತಿಳಿದುಬಂದಿದೆ.

ನಂಜುಂಡೇಗೌಡ ಕಡಿಮೆ ದರದಲ್ಲಿ ನಿವೇಶನ ಕೊಡಿಸುತ್ತೇನೆಂದು ಜನರನ್ನು ನಂಬಿಸಿ, ಲಕ್ಷಾಂತರ ಹಣ ಪಡೆದಿದ್ದರು ಎನ್ನಲಾಗಿದೆ. ಆದರೆ, ಹಣ ವಾಪಸ್ಸು ನೀಡದೆ, ನಿವೇಶನವನ್ನು ಸಹ ನೀಡದೆ, ಮೋಸ ಮಾಡಿದ ಆರೋಪದ ಮೇಲೆ ಅವರ ವಿರುದ್ಧ 4 ಪ್ರಕರಣಗಳು ದಾಖಲಾಗಿದ್ದವು ಎಂದು ಹೇಳಲಾಗುತ್ತಿದೆ.

ಮುನಿಯಪ್ಪ ಎಂಬುವವರಿಗೆ ನಿವೇಶನ ಕೊಡುವುದಾಗಿ 16 ಲಕ್ಷ ಹಣ ಪಡೆಯಲಾಗಿತ್ತು. 10 ಲಕ್ಷ 15 ಲಕ್ಷದಂತೆ ಸುಮಾರು 2 ಸಾವಿರಕ್ಕೂ ಹೆಚ್ಚು ಜನರಿಗೆ ಮೋಸ ಮಾಡಲಾಗಿದೆ. ಅಲ್ಲದೇ, 5 ಸಾವಿರ ಕೋಟಿ ವಂಚಿಸಿರುವ ಆರೋಪ ನಂಜುಂಡೇಗೌಡ ಅವರ ಮೇಲಿದೆ. ಹೀಗಾಗಿ, ಈ ಹಿಂದೆ ಹಲವು ಮಂದಿ ದೂರು ನೀಡಿದ್ದರು. ಇದರ ಅನ್ವಯ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News