ನಾಡಗೀತೆಯಲ್ಲಿ ಮೊದಲ, ಕೊನೆಯ ಚರಣ ಮಾತ್ರ ಸಾಕು: ಕಮಲಾ ಹಂಪನಾ

Update: 2019-11-01 17:33 GMT

ಬೆಂಗಳೂರು, ನ.1: ಕುವೆಂಪು ಅವರ ಬಗ್ಗೆ ನನಗೆ ಅಪಾರವಾದ ಗೌರವವಿದ್ದು, ನಾಡಗೀತೆಯ ಮೊದಲ ಮತ್ತು ಕೊನೆಯ ಚರಣ ಮಾತ್ರ ಉಳಿಸಿಕೊಂಡು ಹಾಡುವಂತಾಗಬೇಕು ಎಂದು ಕಮಲಾ ಹಂಪನಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರವಿವಾರ ಗಾಂಧಿ ಭವನದಲ್ಲಿ ಸಪ್ನ ಬುಕ್ ಹೌಸ್ ಆಯೋಜಿಸಿದ್ದ ಓದು ಜನಮೇಜಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನ ಅರಿವಿಗೆ ಬಂದಂತೆ ದೇಶದ ಯಾವುದೇ ರಾಜ್ಯದಲ್ಲೂ ನಾಡಗೀತೆ ಇಷ್ಟೊಂದು ದೀರ್ಘವಾಗಿಲ್ಲ. ನಮ್ಮ ನಾಡಗೀತೆಯನ್ನೂ ಮೊದಲ ಮತ್ತು ಕೊನೆ ಚರಣ ಉಳಿಸಿಕೊಂಡು ಹಾಡಲು ನಿರ್ಣಯವೊಂದನ್ನು ಅಂಗೀಕರಿಸೇಕೆಂದು ಸಭೆಯಲ್ಲಿ ಒತ್ತಾಯಿಸಿದರು.

ಕಮಲಾ ಅವರ ಮಾತಿಗೆ ಕೆಲವು ಸಭಿಕರು ವಿರೋಧ ವ್ಯಕ್ತಡಿಸಿರುವ ಘಟನೆ ಕೂಡ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News