ಟಿಪ್ಪುಸುಲ್ತಾನ್ ಮತ್ತು ಚನ್ನಪಟ್ಟಣದ ಗೊಂಬೆ

Update: 2019-11-02 05:51 GMT

ಟಿಪ್ಪುಸುಲ್ತಾನ್‌ನ ಪ್ರಯತ್ನದ ಫಲ ಗೊಂಬೆ ತಯಾರಿಕೆಯ ಈ ಪರಂಪರೆ ಚನ್ನಪಟ್ಟಣಕ್ಕೆ ಜಗತ್ಪ್ರಸಿದ್ಧಿ ತಂದುಕೊಟ್ಟಿದೆ. ಇದಕ್ಕೆ ಮೂಲಕಾರಣ ಮೈಸೂರು ಹುಲಿ ಟಿಪ್ಪುಸುಲ್ತಾನ್. ತನ್ನ ರಾಜ್ಯದಲ್ಲಿ ಕರಕುಶಲಗಾರಿಕೆೆಯನ್ನು ಅಭಿವೃದ್ಧಿಪಡಿಸಲು ನಿರ್ಧರಿಸಿದ್ದ ಟಿಪ್ಪು, 17ನೇ ಶತಮಾನದಲ್ಲಿ ಪರ್ಷಿಯಾದಿಂದ ಕುಶಲಕರ್ಮಿಗಳನ್ನು ಕರೆತಂದಿದ್ದ. ಮರದಿಂದ ಗೊಂಬೆ ತಯಾರಿಕೆಯಲ್ಲಿ ನಿಪುಣರಾಗಿದ್ದ ಪರ್ಷಿಯನ್ನರ ಮೂಲಕ ಇಲ್ಲಿನ ಜನರಿಗೆ ತರಬೇತಿ ಕೊಡಿಸಿದ್ದ. ತನ್ನ ಸಾಮ್ರಾಜ್ಯದಲ್ಲಿ ಕುಷಲಕರ್ಮಿಗಳನ್ನು ಅಭಿವೃದ್ಧಿ ಪಡಿಸುವುದು ಮತ್ತು ಜಗತ್ತಿನಲ್ಲಿ ಇದರ ವ್ಯಾಪಾರಕ್ಕೆ ವ್ಯವಸ್ಥೆ ಕಲ್ಪಿಸುವುದು ಟಿಪ್ಪುಸಲ್ತಾನ್‌ನ ಆಲೋಚನೆಯಾಗಿತ್ತು. ಟಿಪ್ಪುನಂತರ ಮೈಸೂರಿನ ಅರಸರು ಈ ಕಲೆಯ ಬಗ್ಗೆ ವಿಶೇಷ ಆಸಕ್ತಿ ತಳೆದಿದ್ದರು. ಮೈಸೂರಿನ ದಿವಾನರು 1902ರಲ್ಲಿ ಚನ್ನಪಟ್ಟಣ ಕುಶಲಕರ್ಮಿ ತರಬೇತಿ ಸಂಸ್ಥೆಯನ್ನು ಆರಂಭಿಸಿ, ಅರಗು, ಬಣ್ಣ, ತೆಂಗಿನ ನಾರಿನಿಂದ ಬಣ್ಣಗಳ ತಯಾರಿ, ಕಾರ್ಪೆಂಟರಿ, ಮಡಿಕೆ ತಯಾರಿಕೆಯಂತಹ ಮೊದಲಾದ ಬಗೆಯ ಕುಶಲ ಕಲೆಗಳ ತರಬೇತಿ ನೀಡಿದ್ದರು. ಮರದ ಗೊಂಬೆಗಳ ಉಗಮವು ಮೈಸೂರಿನ ಆಡಳಿಗಾರ ಟಿಪ್ಪುಸುಲ್ತಾನನ ಕಾಲಕ್ಕೆ ಸೇರಿದ್ದು, ಅವರು ಮರದ ಆಟಿಕೆಗಳ ದೊಡ್ಡ ಅಭಿಮಾನಿಯಾಗಿದ್ದರು.

ಅಂದು ಟಿಪ್ಪುಸುಲ್ತಾನ್ ಗೊಂಬೆಗಳ ತಯಾರಿಕೆಗೆ ಕೊಟ್ಟ ಆಸಕ್ತಿಯ ಪ್ರತಿಫಲ ಇವತ್ತು ಗೊಂಬೆಗಳ ಜೊತೆ ರಾಜ್ಯದಲ್ಲಿನ ನಮ್ಮ ಚನ್ನಪಟ್ಟಣವು ವಿಶ್ವ ವ್ಯಾಪಿ ಪ್ರಸಿದ್ಧಿ ಪಡೆದಿದೆ ಈ ಪ್ರಸಿದ್ಧಿಗೆ ಮೂಲ ಕಾರಣಕರ್ತ ಟಿಪ್ಪುಸುಲ್ತಾನ್. ಸ್ಥಳೀಯ ಉದ್ಯೋಗವನ್ನು ಸೃಷ್ಟಿಸುವಲ್ಲಿ ಟಿಪ್ಪುಸುಲ್ತಾನ್‌ನದ್ದು ಮೇಲುಗೈ.

ಈಗ ಸಾವಿರಕ್ಕೂ ಹೆಚ್ಚು ಬಗೆಯ ಗೊಂಬೆಗಳು ಇಲ್ಲಿ ಸಿದ್ಧಗೊಳ್ಳುತ್ತವೆ. 450ಕ್ಕೂ ಹೆಚ್ಚು ಬಗೆಯ ಗೊಂಬೆಗಳಿಗೆ ಹೆಚ್ಚು ಬೇಡಿಕೆ ಇದೆ. ಇಲ್ಲಿ ತಯಾರಿಸಿದ ಬೊಂಬೆಗಳನ್ನು ಪರ್ಶಿಯಾ, ಈಜಿಪ್ಟ್, ಇರಾನ್, ಚೀನಾ ಮತ್ತು ಟರ್ಕಿ, ಅಮೆರಿಕ ಮತ್ತು ಮುಂತಾದ ದೇಶಗಳಿಗೆ ಕಳುಹಿಸಿ ಕೊಡಲಾಗುತ್ತದೆ. ಸುಮಾರು 5,000ಕ್ಕೂ ಹೆಚ್ಚು ಜನ ಗೊಂಬೆ ತಯಾರಿಕೆಯಲ್ಲಿ ತೊಡಗಿದ್ದಾರೆ, 250ಕ್ಕೂ ಹೆಚ್ಚು ಮನೆಗಳಲ್ಲಿ ತಯಾರಿಸುತ್ತಾರೆ. 50ಕ್ಕಿಂತ ಹೆಚ್ಚು ಸಣ್ಣ ಕಾರ್ಖಾನೆಗಳಲ್ಲಿ ಬೊಂಬೆಗಳನ್ನು ತಯಾರಿಸುತ್ತಾರೆ. ಇವೆಲ್ಲವೂ ಟಿಪ್ಪು ಸುಲ್ತಾನ್ ಕಂಡ ಕನಸು.

Writer - ಚಂದನ್ ಕುಮಾರ್, ಚನ್ನಪಟ್ಟಣ

contributor

Editor - ಚಂದನ್ ಕುಮಾರ್, ಚನ್ನಪಟ್ಟಣ

contributor

Similar News