ಇಸ್ರೇಲ್ ನಿಂದ ವಾಯು ದಾಳಿ: ಫೆಲೆಸ್ತೀನಿ ನಾಗರಿಕ ಮೃತ್ಯು

Update: 2019-11-02 10:05 GMT

ಗಾಝಾ : ಇಸ್ರೇಲ್ ಶನಿವಾರ ಮುಂಜಾನೆ ನಡೆಸಿದ ವಾಯು ದಾಳಿಯಲ್ಲಿ ಫೆಲೆಸ್ತೀನಿ ನಾಗರಿಕನೋರ್ವ ಮೃತಪಟ್ಟಿದ್ದಾರೆ. ಇಸ್ರೇಲಿ ಸೇನೆ ಈ ದಾಳಿ ನಡೆಸಿತ್ತು.

ದಾಳಿಗಳಲ್ಲಿ ಮೃತ ವ್ಯಕ್ತಿಯನ್ನು 27 ವರ್ಷದ ಅಹ್ಮದ್ ಅಲ್-ಶೆಹ್ರಿ ಎಂದು ಗುರುತಿಸಲಾಗಿದೆ.

ದಾಳಿ ನಡೆಸಿದ ಇಸ್ರೇಲಿ ಯುದ್ಧ ವಿಮಾನದ ಮೇಲೆ ಪ್ರತಿ ದಾಳಿ ನಡೆಸಲಾಗಿದೆ. ಗಾಝಾದಿಂದ ದಾಳಿಗಳು ನಡೆದಿರುವ ಬಗ್ಗೆ ಇಸ್ರೇಲಿ ಸೇನೆ ಕೂಡ ದೃಢೀಕರಿಸಿದೆ. ಶುಕ್ರವಾರ ತಡ ರಾತ್ರಿ ಗಾಝಾ ಕಡೆಯಿಂದ ಕನಿಷ್ಠ ಹತ್ತು ರಾಕೆಟ್ ಕ್ಷಿಪಣಿಗಳ ದಾಳಿಯ ನಂತರ ಇಸ್ರೇಲ್ ವಾಯು ದಾಳಿ ನಡೆಸಿತ್ತು. ಎಂಟು ರಾಕೆಟುಗಳನ್ನು ತಡೆಯುವಲ್ಲಿ ತನ್ನ ಕ್ಷಿಪಣಿ ನಿರೋಧಕ ವ್ಯವಸ್ಥೆ ಯಶಸ್ವಿಯಾಗಿದೆ ಎಂದು ಇಸ್ರೇಲ್ ಹೇಳಿಕೊಂಡಿದೆ. ದಾಳಿಯಲ್ಲಿ ಒಂದು ಮನೆಗೆ ಕೂಡ ಹಾನಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News