ಪಶ್ಚಿಮಘಟ್ಟ ಉಳಿಸಲು ಆಗ್ರಹಿಸಿ ಪರಿಸರ ಪ್ರೇಮಿಗಳಿಂದ ಪ್ರತಿಭಟನೆ

Update: 2019-11-02 17:29 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ನ.2: ಕರ್ನಾಟಕದಿಂದ ಗೋವ ರಾಜ್ಯಕ್ಕೆ ಜಾರಿಗೊಳಿಸಲು ಉದ್ದೇಶಿಸಿರುವ ವಿದ್ಯುತ್ ಪ್ರಸರಣ ಮಾರ್ಗ ನಿಲ್ಲಿಸಿ, ಕೈಗಾ ಅಣು ವಿದ್ಯುತ್ ಸ್ಥಾವರದ ವಿಸ್ತರಣೆಯನ್ನು ಸಹ ಸ್ಥಗಿತಗೊಳಿಸುವ ಮೂಲಕ ಪಶ್ಚಿಮಘಟ್ಟ ಉಳಿಸಿ ಎಂದು ಪರಿಸರ ಪ್ರೇಮಿಗಳು ಪ್ರತಿಭಟನೆ ನಡೆಸಿದರು.

ಶನಿವಾರ ನಗರದ ಪುರಭವನದ ಮುಂಭಾಗ ಜಮಾಯಿಸಿದ ನೂರಾರು ಪರಿಸರ ಪ್ರೇಮಿಗಳು, ಪಶ್ಚಿಮಘಟ್ಟದ ಅನನ್ಯತೆಗೆ ಧಕ್ಕೆ ತರುವಂತಹ ಯೋಜನೆಗಳ ವಿರುದ್ಧ ನಾಡಿನ ಜನ ಎಚ್ಚೆತ್ತುಕೊಂಡು ಖಂಡಿಸಬೇಕು ಎಂದರು.

ರಾಜ್ಯದಲ್ಲಿ ಒಂದೆಡೆ ಪ್ರವಾಹ, ಮತ್ತೊಂದೆಡೆ ಬರ ಉಂಟಾಗಲು ಪರಿಸರದ ಮೇಲಿನ ಹಾನಿಯೇ ಪ್ರಮುಖ ಕಾರಣವಾಗಿದ್ದು, ಇದರ ಸಾಮಾನ್ಯ ಅರಿವು ಸರಕಾರಕ್ಕಿರಬೇಕು ಎಂದು ಪ್ರತಿಭಟನಾಕಾರರು ಹೇಳಿದರು.

ಅಪರೂಪದ ವೈವಿಧ್ಯವನ್ನು ಹೊಂದಿರುವ ಪಶ್ಚಿಮಘಟ್ಟದಲ್ಲಿ ಶರಾವತಿ ಭೂ ಅಂತರ್ಗತ ವಿದ್ಯುತ್ ಸಾಗರ ಇನ್ನಿತರ ಅಭಿವೃದ್ಧಿ ಕಾರ್ಯಗಳಿಂದ ಜೀವವೈಧ್ಯಕ್ಕೆ ಧಕ್ಕೆವುಂಟಾಗಲಿದೆ. ಪರಿಸರದ ಸ್ಥಿರತೆಯ ಮೇಲೆ ಮಾರಕ ಪರಿಣಾಮ ಬೀರುವ ಯೋಜನೆಗಳನ್ನು ಕೈಬಿಟ್ಟು ಪರಿಸರ ಉಳಿಸುವ ದೀರ್ಘಕಾಲಿಕ ಯೋಜನೆಗಳ ಬಗ್ಗೆ ಸರಕಾರ ಚಿಂತನೆ ನಡೆಸಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News