ಬಿಎಂಟಿಸಿ ಪ್ರತ್ಯೇಕ ಬಸ್ ಪಥ: ಇನ್ನೂ 15 ತಿಂಗಳು ವಿಳಂಬ

Update: 2019-11-02 18:05 GMT

ಬೆಂಗಳೂರು, ನ.2: ನಗರದಲ್ಲಿ ಬಿಎಂಟಿಸಿ ಬಸ್‌ಗಳ ಸುಗಮ ಸಂಚಾರ ಮತ್ತು ಸಂಚಾರ ದಟ್ಟಣೆ ತಗ್ಗಿಸುವ ದೃಷ್ಟಿಯಿಂದ ಬಿಬಿಎಂಪಿ ಹಾಗೂ ಬಿಎಂಟಿಸಿ ರೂಪಿಸಿದ್ದ ‘ಪ್ರತ್ಯೇಕ ಬಸ್ ಪಥ’ ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳಿವೆ.

ಕೆ.ಆರ್.ಪುರಂನ ಟಿನ್ ಫ್ಯಾಕ್ಟರಿಯಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗೆ ಪ್ರತ್ಯೇಕ ಬಸ್ ಕಾರಿಡಾರ್‌ನಲ್ಲಿ ಬಿಎಂಟಿಸಿ ಬಸ್‌ಗಳು ಈಗಾಗಲೇ ಓಡಾಡಬೇಕಿತ್ತು. ಆದರೆ, ಪ್ರತ್ಯೇಕ ಬಸ್ ಪಥದಲ್ಲಿ ಬಿಬಿಎಂಪಿ ಆಳವಡಿಸಿದ್ದ ಕಬ್ಬಿಣದ ತಡೆ ಕಂಬಗಳಿಗೆ ವಾಹನಗಳು ಢಿಕ್ಕಿ ಹೊಡೆಯುತ್ತಿರುವುದರಿಂದ ಪ್ರತ್ಯೇಕ ಬಸ್ ಪಥಕ್ಕೆ ಸಮಸ್ಯೆ ತಂದೊಡ್ಡಿದೆ.

ನಿರ್ಧಿಷ್ಟ ಗಡುವಿನಲ್ಲಿ ಕಾಮಗಾರಿ ಪೂರ್ಣಗೊಳ್ಳದ ಕಾರಣ, ಪ್ರತ್ಯೇಕ ಬಸ್ ಪಥ ಯೋಜನೆಯನ್ನು ಇನ್ನೂ 15 ತಿಂಗಳ ಬಳಿಕ ಜಾರಿಗೆ ತರಲು ಬಿಬಿಎಂಪಿ ನಿರ್ಧರಿಸಿದೆ. ಪ್ರಸ್ತುತ 6 ಕಿ.ಮೀ ಉದ್ದದ ಪ್ರತ್ಯೇಕ ಪಥ ನಿರ್ಮಿಸಲಾಗಿದೆ. ಬಸ್‌ಗಳ ಜೊತೆಗೆ ಖಾಸಗಿ ವಾಹನಗಳು ಸಂಚರಿಸುತ್ತವೆ. ಅಲ್ಲದೆ, ಮಳೆ ಕಾರಣ ಮಾಕಿರ್ಂಗ್ ಮಾಡಲು ಆಗಿಲ್ಲ. ಹೀಗಾಗಿ ಬಸ್ ಪಥಕ್ಕಾಗಿ ಅಳವಡಿಸಬೇಕಿದ್ದ ಮಾರ್ಗದ ಕಂಬಗಳನ್ನು ಪೂರ್ಣ ಪ್ರಮಾಣದಲ್ಲಿ ಅಳವಡಿಸಲು ಸಾಧ್ಯವಾಗಿಲ್ಲ. ಹೀಗಾಗಿ ಬಸ್ ಪಥ ಯೋಜನೆ ನಿಗದಿತ ಅವಧಿಯಲ್ಲಿ ಆರಂಭಿಸಲು ಹಿನ್ನಡೆಯಾಗಿದೆ.

ಬಿಬಿಎಂಪಿಗೆ 18 ಕಿ.ಮೀ. ಉದ್ದದ ಮಾರ್ಗ ನಿರ್ಮಾಣಕ್ಕೆ 20 ಸಾವಿರಕ್ಕೂ ಹೆಚ್ಚು ಪ್ರತ್ಯೇಕ ಮಾರ್ಗದ ಪ್ಲಾಸ್ಟಿಕ್ ಕಂಬಗಳ ಅಗತ್ಯವಿದೆ. ಸದ್ಯ ಬಿಬಿಎಂಪಿಗೆ ಮಾರ್ಗದ ಕಂಬಗಳು ಪೂರೈಕೆಯನ್ನು ಒಂದೇ ಒಂದು ಕಂಪೆನಿ ಉತ್ಪಾದಿಸುತ್ತಿದ್ದು, ಪರಿಕರಗಳ ಸಮರ್ಪಕ ಪೂರೈಕೆ ಹಿನ್ನೆಲೆಯಲ್ಲಿ ಕೇವಲ 2ಕಿ.ಮೀ.ಲೇನ್ ಮಾತ್ರ ನಿರ್ಮಾಣವಾಗಿದೆ. ಇದುವರೆಗೆ ನಿರ್ಮಾಣವಾಗಿರೋ ಪಥದಲ್ಲೇ ಪ್ರಾಯೋಗಿಕವಾಗಿ ಆರಂಭಿಸಿದ್ದು, ಆದಷ್ಟು ಬೇಗ ಬಸ್ ಪಥ ಜಾರಿಯಾಗಲಿದೆ ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ತಿಳಿಸಿದರು.

ಪ್ರತ್ಯೇಕ ಮಾರ್ಗ ವಿಳಂಬ

ಕೆ.ಆರ್.ಪುರ ಟಿನ್ ಫ್ಯಾಕ್ಟರಿಯಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌ವರೆಗಿನ 18 ಕಿ.ಮೀ.ಗಳ ಪೈಕಿ 10ಕಿ.ಮೀ. ಪ್ರತ್ಯೇಕ ಪಥ ನಿರ್ಮಾಣ ಕಾಮಗಾರಿ ಕೈಗೊಂಡಿದ್ದು, ಬುಲ್ಲಾರ್ಡ್ ಅಳವಡಿಕೆ ವಿಳಂಬವಾಗುತ್ತಿದೆ. ಹೀಗಾಗಿ ನಿಗದಿತ ಅವಧಿಯಲ್ಲಿ 10 ಕಿ.ಮೀ ಪ್ರತ್ಯೇಕ ಪಥ ನಿರ್ಮಾಣ ಗುರಿ ತಲುಪಲು ಸಾಧ್ಯವಾಗಿಲ್ಲ’

-ಅನಿಲ್ ಕುಮಾರ್, ಬಿಬಿಎಂಪಿ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News