ದುಬೈ : ಅನಿವಾಸಿ ಕನ್ನಡಿಗರ ಒಕ್ಕೂಟ ವತಿಯಿಂದ ಕನ್ನಡ ರಾಜ್ಯೋತ್ಸವ

Update: 2019-11-04 13:54 GMT

ಅಬುಧಾಬಿ :  ಅನಿವಾಸಿ ಕನ್ನಡಿಗರ ಒಕ್ಕೂಟ ಅಬುಧಾಬಿ ವತಿಯಿಂದ 64 ನೇ ಕನ್ನಡ ರಾಜ್ಯೋತ್ಸವವನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳ ಅನಿವಾಸಿ ಕನ್ನಡಿಗರು ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದ ಅನಿವಾಸಿ ಕನ್ನಡಿಗರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶರೀಫ್ ಸರ್ವೆ ಅವರು ಮೈಸೂರ್ ಹೇಗೆ ಕರ್ನಾಟಕವಾಯಿತು ಎಂದು ವಿವರಿಸಿ, ಕನ್ನಡ ರಾಜ್ಯೋತ್ಸವದ ಶುಭ ಹಾರೈಸಿದರು. 

ಅನಿವಾಸಿ ಕನ್ನಡಿಗರ ಒಕ್ಕೂಟದ ಅಬುಧಾಬಿ ಅಧ್ಯಕ್ಷ ಶಾಫಿ ತಿಂಗಳಾಡಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಕನ್ನಡ ಭಾಷೆಯ ಮಹತ್ವನ್ನು ವಿವರಿಸಿ ಕನ್ನಡಿಗರಾದ ನಾವು ಕೇವಲ ರಾಜ್ಯೋತ್ಸವದಂದು ಮಾತ್ರ ಪ್ರೀತಿ ತೋರಿಸದೆ ಪ್ರತಿಯೊಂದು ಕಾರ್ಯಕ್ರಮದಲ್ಲಿ ಕನ್ನಡದಲ್ಲೇ ಮಾತನಾಡಿ ಎಂದು ನೆರೆದವರಿಗೆ ಕರೆಕೊಟ್ಟರು.

ಸುಮಾರು ಐವತ್ತಕ್ಕೂ ಹೆಚ್ಚು ಅನಿವಾಸಿಗರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಕಾರ್ಯಕ್ರಮದಲ್ಲಿ ಆಯೋಜಿಸಿದ್ದ ಫನ್ ಗೇಮ್ಸ್, ಮೈಂಡ್ ಗೇಮ್ಸ್ ಗಳನ್ನು ಆಡಿ ಆನಂದ ಪಡೆದರು. ಅನಿವಾಸಿ ಕನ್ನಡಿಗರ ಒಕ್ಕೂಟ, ಅಬುಧಾಬಿ ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಸ್ವಯಂಸೇವಕರು ಈ ಕಾರ್ಯಕ್ರಮಕ್ಕೆ ಸಹಕರಿಸಿದರು.

ಅನಿವಾಸಿ ಕನ್ನಡಿಗರ ಒಕ್ಕೂಟ, ಕಾರ್ಯಕಾರಿ ಸಮಿತಿ ಕಾರ್ಯದರ್ಶಿ ಯಹ್ಯಾ ಕೊಡ್ಲಿಪೇಟೆ ಗೇಮ್ಸ್ ಗಳನ್ನು ನಡೆಸಿ ಕೊಟ್ಟರು. ಕಾರ್ಯಕ್ರಮದ‌ ನಿರ್ದೇಶಕ ಸಮದ್‌ ಸಂಟ್ಯಾರ್ ಕೆಲಸದ ಒತ್ತಡಗಳನ್ನು ಫನ್ ಗೇಮ್ ಮತ್ತು ಮೈಂಡ್ ಗೇಮ್ ಗಳ ಮುಖಾಂತರ ನಿಭಾಯಿಸಬಹುದು ಎನ್ನುವ ಟಿಪ್ಸ್ ಕೊಟ್ಟು, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News