ಟರ್ಕಿಯ ವಾಣಿಜ್ಯ ನಿಯೋಗ ಬೆಂಗಳೂರಿಗೆ ಭೇಟಿ

Update: 2019-11-04 16:16 GMT

ಬೆಂಗಳೂರು, ನ.4: ಟರ್ಕಿ ಹಾಗೂ ಭಾರತದ ನಡುವಿನ ದ್ವಿಪಕ್ಷೀಯ ವ್ಯಾಪಾರವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಬೆಂಗಳೂರಿಗೆ ಭೇಟಿ ನೀಡಿದ ಟರ್ಕಿಯ ವಾಣಿಜ್ಯ ನಿಯೋಗದೊಂದಿಗೆ ಚರ್ಚೆ ನಡೆದಿದೆ.

ಟರ್ಕಿಯ 17 ಕಂಪನಿಗಳು ಈ ವಾಣಿಜ್ಯ ಸಭೆಯಲ್ಲಿ ಭಾಗವಹಿಸಿದ್ದು, ಈ ಸಭೆಯನ್ನು ಕ್ರೆಸೆಂಡೊ ಬಿ2ಬಿ ಅನ್ನು ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಹೋಮ್ ಅಪ್ಲಯನ್ಸಸ್ ವಿಭಾಗದ 100ಕ್ಕೂ ಹೆಚ್ಚು ಭಾರತೀಯ ಕಂಪನಿಗಳೊಂದಿಗೆ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ 150 ಕ್ಕೂ ಅಧಿಕ ವ್ಯಾಪಾರಕ್ಕೆ ಸಂಬಂಧಿಸಿದ ಚರ್ಚೆ ನಡೆದಿವೆ ಎಂದು ಕ್ರೆಸೆಂಡೊ ವರ್ಲ್ಡ್‌ವೈಡ್‌ನ ನಿರ್ದೇಶಕ ಸಾಕೇತ್ ಪೂಜಾರಿ ಹೇಳಿದರು.

ಟಿಇಟಿ-ಟರ್ಕಿಷ್ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಎಕ್ಸ್‌ಪೋರ್ಟರ್ಸ್‌ ಅಸೋಸಿಯೇಷನ್‌ನ ಮಂಡಳಿಯ ಸದಸ್ಯ ಬೆಸಿಮ್ ಒಕ್ತಯರ್‌ರ ನೇತೃತ್ವದ ನಿಯೋಗಕ್ಕೆ ಕ್ರೆಸೆಂಡೊ ವರ್ಲ್ಡ್‌ವೈಡ್‌ನ ಅಧ್ಯಕ್ಷ ಶಾಲ್ ಜಾಧವ್, ಇಲ್ಲಿನ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಮಾರುಕಟ್ಟೆಯ ಸಾಮರ್ಥ್ಯ ಮತ್ತು ಭಾರತದಲ್ಲಿ ಉದ್ಯಮ ನಡೆಸುವ ಅವಕಾಶಗಳು ಕುರಿತು ವಿವರ ನೀಡಿದರು ಎಂದು ಸಾಕೇತ್ ತಿಳಿಸಿದರು.

ಭಾರತೀಯ ಮಾರುಕಟ್ಟೆಗೆ ಜಂಟಿಯಾಗಿ ವಿಸ್ತರಿಸಲು ನಿರೀಕ್ಷಿಸುತ್ತಿರುವ ಭಾರತ ಮತ್ತು ಟರ್ಕಿಯ ಕಂಪನಿಗಳಿಗೆ ಉತ್ತಮ ಚರ್ಚೆಗಳಿಗೆ ವೇದಿಕೆಯಾಯಿತು. ಭಾರತದ ಪ್ರಮುಖ ಕಂಪನಿಗಳ ಉತ್ಪಾದಕರು, ವಿತರಕರು, ಕೊಳ್ಳುಗರು ಮತ್ತು ಪೂರೈಕೆದಾರರು ಇತ್ಯಾದಿ ಭಾಗವಹಿಸಿದ್ದರು ಎಂದು ಕುಶಾಲ್ ಶಾ ಮತ್ತು ಸಯಾಲಿ ಅಭಿಪ್ರಾಯಪಟ್ಟರು ಎಂದು ಅವರು ಮಾಹಿತಿ ನೀಡಿದರು.

ಇದು ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಗೃಹ ಸಾಧನಗಳ ಮಾರುಕಟ್ಟೆಯನ್ನು ಟರ್ಕಿಯ ಕಂಪನಿಗಳ ಸಹಯೋಗದಲ್ಲಿ ಉತ್ಪಾದನಾ ತಂತ್ರಜ್ಞಾನ, ತಾಂತ್ರಿಕ ಸಹಯೋಗ, ಜಂಟಿ ಉದ್ಯಮಗಳು ಮತ್ತು ಕಾರ್ಯತಂತ್ರೀಯ ಸಹಯೋಗಗಳ ಮೂಲಕ ಅಭಿವೃದ್ಧಿಪಡಿಸುವ ಉಪಕ್ರಮವಾಗಿದೆ ಎಂದರು.

ಕ್ರೆಸೆಂಡೊ ಆಸಕ್ತಿ ಹೊಂದಿರುವ ಭಾರತೀಯ ಮತ್ತು ಟರ್ಕಿಯ ಕಂಪನಿಗಳ ನಡುವೆ ಬಿ2ಬಿ ಚರ್ಚೆಗಳನ್ನು ಮತ್ತಷ್ಟು ಬೆಂಬಲಿಸಲಿದೆ. ಭಾರತ ಹಾಗೂ ಟರ್ಕಿಯ ಕಂಪನಿಗಳು ತೋರಿರುವ ಪ್ರತಿಕ್ರಿಯೆ ಅಭೂತಪೂರ್ವವಾಗಿದೆ ಮತ್ತು ಅದರ ಯಶಸ್ಸಿಗೆ ಸಾಕ್ಷಿಯಾಗಿದೆ. ಈ ನಿಯೋಗ ನ.7-8ರಂದು ಮುಂಬೈ ಹಾಗೂ ಸುತ್ತಮುತ್ತಲಿನ ನಗರಗಳಿಗೆ ಭೇಟಿ ನೀಡಲಿದೆ ಎಂದು ಅವರು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News