×
Ad

ಬೆಂಗಳೂರು: ನಾಳೆ ಮೇಯರ್ ಪ್ರಶಸ್ತಿ ಪ್ರದಾನ

Update: 2019-11-04 22:09 IST

ಬೆಂಗಳೂರು,ನ.4: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ನಾಳೆ ಬಹತ್ ಬೆಂಗಳೂರು ಮಹಾನಗರ ಪಾಲಿಕೆ ನೌಕರರ ಕನ್ನಡ ಸಂಘ ಮೇಯರ್ ಪ್ರಶಸ್ತಿ ಪ್ರದಾನ ಮಾಡಲಿದೆ. ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಹಮ್ಮಿಕೊಂಡಿರುವ 64ನೇ ಕನ್ನಡ ರಾಜ್ಯೋತ್ಸವ ಹಾಗೂ ನಗರದೇವತೆ ಭುವನೇಶ್ವರಿ ದೇವಿ ಉತ್ಸವದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಮಾಜಿ ಸಚಿವೆ ಬಿ.ಟಿ.ಲಲಿತನಾಯಕ್, ಹಿರಿಯ ಸಾಹಿತಿ ಮರುಳಸಿದ್ದಪ್ಪ, ಹಿರಿಯ ಚಿತ್ರನಟ ರಾಜೇಶ್, ಚಿತ್ರನಿರ್ದೇಶಕ ಸಿ.ವಿ.ಶಿವಶಂಕರ್, ನಟಿಯರಾದ ಗಿರಿಜಾ ಲೋಕೇಶ್, ಸುಧಾ ನರಸಿಂಹರಾಜು, ಚಿತ್ರನಟ ಸಂಚಾರಿ ವಿಜಯ್, ಸಾಹಿತಿ ಕಾ.ತ. ಚಿಕ್ಕಣ್ಣ, ಕ್ರಿಕೆಟ್ ಪಟು ಸುಜೀತ್ ಸೋಮಸುಂದರ್, ಅಂತರ್‌ರಾಷ್ಟ್ರೀಯ ಕ್ರೀಡಾಪಟು ಕುಮಾರಿ ಖುಷಿ ದಿನೇಶ್, ಕೆ.ಚಂದ್ರಮೌಳಿ, ಮು.ಗೋವಿಂದರಾಜು, ಧರ್ಮಪತ್ನಿ ಧನಭಾಗ್ಯಮ್ಮ, ಕನ್ನಡಪರ ಹೋರಾಟಗಾರರಾದ ರಾಜಣ್ಣ ಎಂ., ಶಂಕರ್ ಬಿ. ನಾಗರಬಾವಿ, ಪತ್ರಕರ್ತರಾದ ಎಸ್.ಶ್ಯಾಮ್ ಹಾಗೂ ರಮೇಶ್ ಪಾಳ್ಯ ಅವರಿಗೆ ನಿವೃತ್ತ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಇದೇ ಸಂದರ್ಭದಲ್ಲಿ ಬಿಬಿಎಂಪಿ ಅಧಿಕಾರಿಗಳಾದ ಡಾ.ಮನೋರಂಜನ್ ಹೆಗ್ಡೆ, ಕೆ.ಆರ್.ಪಲ್ಲವಿ, ಈಶ್ವರ್.ಎಸ್ ರಾಯುಡು, ಬಸವರಾಜ ವೈ. ಅಂಬಿಗೇರ, ದೇವೇಂದ್ರಪ್ಪ, ಮಾಲತಿ ಕೆ., ಜಿ.ಎನ್.ಆನಂದ್, ಜಿ.ಆರ್.ನಂಜುಂಡಪ್ಪ, ವಿಶ್ವನಾಥ್ ಕೆ., ಎಂ.ಅನಿತ, ಸತ್ಯಕುಮಾರ್, ಎಂ.ಮಾರೇಗೌಡ ಅವರಿಗೆ ಗೌರವ ಪುರಸ್ಕಾರ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News