×
Ad

ಬಿಎಸ್‌ವೈ ದ್ವೇಷದ ರಾಜಕಾರಣದಲ್ಲಿ ಮುಳುಗಿದ್ದಾರೆ: ಎಚ್.ಡಿ.ರೇವಣ್ಣ

Update: 2019-11-05 22:28 IST

ಬೆಂಗಳೂರು, ನ.5: ‘ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅಧಿಕಾರ ವಹಿಸಿಕೊಂಡ ವೇಳೆ ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದಿದ್ದರು. ಆದರೆ, ಅವರು ಇದೀಗ ವಿಪಕ್ಷ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳ ಕಾಮಗಾರಿಗಳಿಗೆ ತಡೆ ನೀಡುವ ಮೂಲಕ ದ್ವೇಷದ ರಾಜಕಾರಣದಲ್ಲಿ ಮುಳುಗಿದ್ದಾರೆ’ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ವಾಗ್ದಾಳಿ ನಡೆಸಿದರು.

ಮಂಗಳವಾರ ವಿಧಾನಸೌಧದಲ್ಲಿನ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಸಿಎಂ ಬಿಎಸ್‌ವೈ ಸರಕಾರದ ನೂರು ದಿನದ ಆಡಳಿತದಲ್ಲಿ ವಿಫಲವಾಗಿದೆ. ಮಾಜಿ ಪ್ರಧಾನಿ ದೇವೇಗೌಡ ಮತ್ತವರ ಕುಟುಂಬದವನ್ನು ಟೀಕಿಸುವವರಿಗೆ ಕೊಡುಗೆ ನೀಡುತ್ತಿದ್ದಾರೆಂದು ಲೇವಡಿ ಮಾಡಿದರು.

ಏನು ಕ್ರಮ ಕೈಗೊಂಡಿದ್ದೀರಿ: ಐಎನ್‌ಎ ಹೌಸಿಂಗ್ ಸೊಸೈಟಿ, ಐಎನ್‌ಎ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ, ಐಎನ್‌ಎ ಫೈನಾನ್ಸ್ ಸೊಸೈಟಿಯಲ್ಲಿ 1,500 ಕೋಟಿ ರೂ.ನಷ್ಟು ಸಾರ್ವಜನಿಕರ ಹಣ ವಂಚನೆಯಾಗಿರುವ ಆರೋಪವಿದೆ. ಈ ಆರೋಪದ ಬಗ್ಗೆ ರಾಜ್ಯ ಸರಕಾರ ಏನು ಕ್ರಮ ಕೈಗೊಂಡಿದೆ ಎಂದು ರೇವಣ್ಣ ಪ್ರಶ್ನಿಸಿದರು.

ಕೆಎಂಎಫ್‌ನಿಂದ ಪಶು ಆಹಾರ ತಯಾರಿಕೆಗೆ ಅವಶ್ಯವಿರುವ ಮೆಕ್ಕೆಜೋಳವನ್ನು ನೇರವಾಗಿ ರೈತರಿಂದ ಬೆಂಬಲ ಬೆಲೆಗೆ ಖರೀದಿಸಲು ಕೆಟಿಟಿಪಿ ಕಾಯ್ದೆ ಕಲಂ 4 ‘ಜಿ’ನಡಿ ವಿನಾಯ್ತಿಗೆ ಪತ್ರ ಬರೆದಿದ್ದರೂ ಸಿಎಂ ಅವಕಾಶ ನೀಡಿಲ್ಲ. ಆದರೆ ಕೆಆರ್ ಪೇಟೆಯ ಅನರ್ಹ ಶಾಸಕ ನಾರಾಯಣಗೌಡ ಕ್ಷೇತ್ರದ 10ಕೋಟಿ ರೂ.ಕಾಮಗಾರಿಗೆ 4 ‘ಜಿ’ ವಿನಾಯ್ತಿ ನೀಡಲು ಸಿಎಂ ಆದೇಶಿಸಿದ್ದಾರೆಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News