×
Ad

ಮೊದಲು ವೈದ್ಯರನ್ನು ಬಂಧಿಸಿ: ಕರವೇ ಆಗ್ರಹ, ಸಂತ್ರಸ್ತರ ಜೊತೆ ಪ್ರತಿಭಟನೆ

Update: 2019-11-05 22:30 IST

ಬೆಂಗಳೂರು, ನ.5: ಮಿಂಟೋ ವೈದ್ಯರ ನಿರ್ಲಕ್ಷದಿಂದಾಗಿ ಬರೋಬ್ಬರಿ 22 ಮಂದಿ ದೃಷ್ಟಿ ಕಳೆದುಕೊಂಡಿದ್ದು, ಈ ಸಂಬಂಧ ವೈದ್ಯರನ್ನು ಈ ಕೂಡಲೇ ಬಂಧಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ.

ಮಂಗಳವಾರ ನಗರದ ಪುರಭವನ ಮುಂಭಾಗ ಜಮಾಯಿಸಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹಾಗೂ ದೃಷ್ಟಿ ಕಳೆದುಕೊಂಡ ಸಂತ್ರಸ್ತರು ಜಂಟಿಯಾಗಿ ಪ್ರತಿಭಟನೆ ನಡೆಸಿ, ತಪ್ಪಿತಸ್ಥ ವೈದ್ಯರನ್ನು ಬಂಧಿಸಬೇಕೆಂದು ಒತ್ತಾಯ ಮಾಡಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕರವೇ ಅಧ್ಯಕ್ಷ ನಾರಾಯಣಗೌಡ, ತಮ್ಮ ವೇದಿಕೆ ಕಾರ್ಯಕರ್ತರು ಇದುವರೆಗೂ ಯಾರ ಮೇಲೂ ಹಲ್ಲೆ, ದೌರ್ಜನ್ಯ ನಡೆಸಿಲ್ಲ. ಈ ಸಂಬಂಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದು, ಸಂತ್ರಸ್ತರ ಪರವಾಗಿ ಹೋರಾಟ ಮುಂದುವರೆಸಲಿದ್ದೇವೆ ಎಂದರು.

ವೇದಿಕೆಯ ಮಹಿಳಾ ಅಧ್ಯಕ್ಷೆ ಅಶ್ವಿನಿಗೌಡ, ಮಿಂಟೋ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ವೈದ್ಯರ ಮೇಲೆ ಹಲ್ಲೆ ನಡೆಸಿಲ್ಲ. ಬದಲಾಗಿ, ಅವರ ತಪ್ಪುಗಳ ಬಗ್ಗೆ ಪ್ರಶ್ನೆ ಮಾಡಿದ್ದೇವೆ. ಆದರೆ, ನಮ್ಮ ಮೇಲೆಯೇ ಸುಳ್ಳು ಆರೋಪ ಮಾಡಿದ್ದಾರೆ. ನಮ್ಮ ಜೊತೆ ಸಂತ್ರಸ್ತರಿದ್ದು, ತಪ್ಪುಗಳನ್ನು ಮರೆಮಾಚಲು ನಾಟಕವಾಡುತ್ತಿದ್ದಾರೆ ಎಂದು ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News