ಕನ್ನಡ ನಾಮಫಲಕ ಕಡ್ಡಾಯಕ್ಕೆ ಸಂಘ-ಸಂಸ್ಥೆಗಳ ಸಹಕಾರ ಅಗತ್ಯ: ಮೇಯರ್ ಗೌತಮ್ ಕುಮಾರ್

Update: 2019-11-05 17:49 GMT

ಬೆಂಗಳೂರು, ನ.5: ನಗರದಲ್ಲಿ ಕನ್ನಡ ನಾಮಫಲಕ ಕಡ್ಡಾಯವಾಗಿ ಜಾರಿಯಾಗಬೇಕಾದರೆ ಸಂಘ-ಸಂಸ್ಥೆಗಳ ಸಹಕಾರ ಅಗತ್ಯ ಎಂದು ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಜೈನ್ ಅಭಿಪ್ರಾಯಪಟ್ಟರು.

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮಂಗಳವಾರ ಮಹಾನಗರ ಪಾಲಿಕೆ ನೌಕರರ ಕನ್ನಡ ಸಂಘ ಹಮ್ಮಿಕೊಂಡಿದ್ದ 64ನೇ ಕನ್ನಡ ರಾಜ್ಯೋತ್ಸವ ಹಾಗೂ ನಗರ ದೇವತೆ ಭುವನೇಶ್ವರಿ ದೇವಿ ಉತ್ಸವ ಮತ್ತು ಮೇಯರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಮಾತನಾಡಿ, ಉತ್ತಮ ಕೆಲಸ ಮಾಡಿದವರನ್ನು ಗುರುತಿಸಿ ಪ್ರಶಸ್ತಿ ನೀಡುವ ಕೆಲಸ ಶ್ಲಾಘನೀಯ. ಇದರಿಂದ ಪುರಸ್ಕೃತರು ಮತ್ತಷ್ಟು ಉತ್ತಮ ಕೆಲಸ ಮಾಡಲು ಪ್ರೇರಣೆಯಾಗುತ್ತದೆ ಎಂದು ಹೇಳಿದರು.

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಾದ ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಮಾಜಿ ಸಚಿವೆ ಬಿ.ಟಿ. ಲಲಿತಾನಾಯಕ್, ಹಿರಿಯ ಸಾಹಿತಿ ಮರುಳಸಿದ್ದಪ್ಪ, ಹಿರಿಯ ಚಿತ್ರನಟ ರಾಜೇಶ್, ಚಿತ್ರನಿರ್ದೇಶಕ ಸಿ.ವಿ. ಶಿವಶಂಕರ್, ಚಿತ್ರನಟಿಯರಾದ ಗಿರಿಜಾ ಲೋಕೇಶ್, ಸುಧಾ ನರಸಿಂಹರಾಜು, ಚಿತ್ರನಟ ಸಂಚಾರಿ ವಿಜಯ್, ಸಾಹಿತಿ ಕಾ.ತ. ಚಿಕ್ಕಣ್ಣ, ಕ್ರೀಡಾಪಟು ಸುಜಿತ್ ಸೋಮಸುಂದರ್, ಅಂತರ್‌ರಾಷ್ಟ್ರೀಯ ಕ್ರೀಡಾಪಟು ಖುಷಿ ದಿನೇಶ್, ಕೆ. ಚಂದ್ರಮೌಳಿ, ಧನಭಾಗ್ಯಮ್ಮ, ಕನ್ನಡಪರ ಹೋರಾಟಗಾರರಾದ ರಾಜಣ್ಣ ಎಂ., ಶಂಕರ್ ಬಿ. ನಾಗರಬಾವಿ, ಪತ್ರಕರ್ತರಾದ ಎಸ್.ಶ್ಯಾಮ್ ಹಾಗೂ ರಮೇಶ್ ಪಾಳ್ಯ ಅವರಿಗೆ ಮೇಯರ್ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಬಿಬಿಎಂಪಿ ಅಧಿಕಾರಿಗಳಾದ ಡಾ.ಮನೋರಂಜನ್ ಹೆಗ್ಡೆ, ಕೆ.ಆರ್. ಪಲ್ಲವಿ, ಈಶ್ವರ್ ಎಸ್. ರಾಯುಡು, ಬಸವರಾಜ ವೈ ಅಂಬಿಗೇರ, ದೇವೇಂದ್ರಪ್ಪ, ಮಾಲತಿ ಕೆ., ಜಿ.ಎನ್. ಆನಂದ್, ಜಿ.ಆರ್. ನಂಜುಂಡಪ್ಪ, ವಿಶ್ವನಾಥ್ ಕೆ., ಎಂ.ಅನಿತ, ಸತ್ಯಕುಮಾರ್, ಎಂ.ಮಾರೇಗೌಡ ಅವರಿಗೆ ಗೌರವ ಪುರಸ್ಕಾರ ಮಾಡಲಾಯಿತು.

ಹಿರಿಯ ಸಾಹಿತಿ ಎಸ್.ಜಿ. ಸಿದ್ದರಾಮಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಮೇಯರ್ ಮೋಹನ್‌ರಾಜ್, ಬಿಬಿಎಂಪಿ ಆಯುಕ್ತ ಅನಿಲ್‌ಕುಮಾರ್, ಕಸಾಪ ಮಾಜಿ ಗೌರವ ಕಾರ್ಯದರ್ಶಿ ಸಿ.ಕೆ.ರಾಮೇಗೌಡ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News