ರೈಲಿನಲ್ಲಿ ಕನ್ನಡವಿಲ್ಲದ ಫಲಕಗಳು

Update: 2019-11-06 17:08 GMT

ಬೆಂಗಳೂರು, ನ.6: ಮಹಾರಾಷ್ಟ್ರದ ಸೋಲಾಪುರ-ಬೆಂಗಳೂರು ಮಾರ್ಗವಾಗಿ ಸಂಚರಿಸುವ ರೈಲಿನಲ್ಲಿ ಕನ್ನಡ ಇಲ್ಲದ ಫಲಕಗಳು ರಾರಾಜಿಸುತ್ತಿವೆ.

ಬೋಗಿಗಳಲ್ಲಿರುವ ಪ್ರಯಾಣಿಕ ಮಾರ್ಗಸೂಚಿ ಫಲಕಗಳಲ್ಲಿ ಮಲಯಾಳಂ, ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಸೂಚನೆಗಳಿವೆ. ಮಹಾರಾಷ್ಟ್ರದ ಸೋಲಾಪುರಕ್ಕೆ ಹೋಗುವ ಈ ರೈಲಿನಲ್ಲಿ ದಕ್ಷಿಣ ರೈಲ್ವೆಯಿಂದ ಹಾಕಿರುವ ಫಲಕದಲ್ಲಿ ಮಲಯಾಳಂ ಭಾಷೆ ಇದೆ.

ನೈರುತ್ಯ ರೈಲ್ವೆಯಲ್ಲಿ ಹಿಂದಿ, ಇಂಗ್ಲಿಷ್ ಜತೆಗೆ ಕನ್ನಡ ಭಾಷೆ ಇರುತ್ತದೆ. ಇದು ದಕ್ಷಿಣ ರೈಲ್ವೆಯ ಫಲಕವಾಗಿರುವ ಕಾರಣ ಮಲಯಾಳಂನಲ್ಲಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆದರೆ, ಪ್ರಯಾಣಿಕರು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಲಾಪುರ ಬೆಂಗಳೂರು ರೈಲಿನಲ್ಲಿ ದಕ್ಷಿಣ ರೈಲ್ವೆಯ ಕೆಲ ಬೋಗಿಗಳು ಸಂಯೋಜನೆಗೊಂಡಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News