ಯುಎಇ: ಗಲ್ಫ್ ಮೆಡಿಕಲ್ ವಿವಿಯ 21ನೇ ವರ್ಷಾಚರಣೆ

Update: 2019-11-07 11:45 GMT

ಅಜ್ಮಾನ್ : ಮಧ್ಯ ಪ್ರಾಚ್ಯ ಪ್ರದೇಶದಲ್ಲಿ ಅತ್ಯಂತ ದೊಡ್ಡ ಖಾಸಗಿ ವೈದ್ಯಕೀಯ ವಿಶ್ವವಿದ್ಯಾಲಯವಾಗಿರುವ ಇಲ್ಲಿಯ ಗಲ್ಫ್ ಮೆಡಿಕಲ್ ವಿವಿ (ಜಿಎಂಯು)ಯು ಇತ್ತೀಚಿಗೆ ತನ್ನ 21ನೇ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಿತು.

ವಿವಿ ಕ್ಯಾಂಪಸ್‌ನಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಜಿಎಂಯು ಸ್ಥಾಪಕ ಹಾಗೂ ವಿಶ್ವಸ್ತ ಮಂಡಳಿಯ ಅಧ್ಯಕ್ಷ ಡಾ. ತುಂಬೆ ಮೊಯ್ದೀನ್ ಅವರು, ನಾವು ಭವಿಷ್ಯದ ವೈದ್ಯಕೀಯ ಶಿಕ್ಷಣವನ್ನು ಒದಗಿಸುವ ಪ್ರಮುಖ ಶೈಕ್ಷಣಿಕ ಆರೋಗ್ಯ ವ್ಯವಸ್ಥೆಯಾಗಿ ಬದಲಾಗುತ್ತಿರುವ ಮತ್ತು ಇದೇ ವೇಳೆ ಅತ್ಯಾಧುನಿಕ ಆರೋಗ್ಯ ರಕ್ಷಣೆ ಒದಗಿಸುತ್ತಿರುವ ಹಾಗೂ ಪ್ರಮುಖ ಸಂಶೋಧನಾ ಕೇಂದ್ರವಾಗಿರುವ ಈ ಕಾಲಘಟ್ಟದಲ್ಲಿ 21 ವರ್ಷಗಳನ್ನು ಪೂರ್ಣಗೊಳಿಸಿರುವುದು ಜಿಎಂಯು ಪಾಲಿಗೆ ಮಹತ್ವದ ಹೆಗ್ಗುರುತು ಆಗಿದೆ ಎಂದು ಹೇಳಿದರು.

ಜಿಎಂಯು ಕುಲಪತಿ ಪ್ರೊ.ಹೋಸಮ್ ಹಮ್ದಿ ಅವರು ಜಿಎಂಯುದ ಭವಿಷ್ಯದ ಯೋಜನೆಗಳ ಕುರಿತು ವಿವರಿಸಿದರೆ, ಜಿಎಂಯುದ ಬೆಳವಣಿಗೆಯಿಂದ ತಾನು ಪ್ರಭಾವಿತನಾಗಿದ್ದೇನೆ ಎಂದು ಅಮೆರಿಕದ ಮೆಡಿಕಲ್ ಕಾಲೇಜ್ ಆಫ್ ವಿಸ್ಕಿನ್ಸನ್‌ನ ಅಧ್ಯಕ್ಷ ಮತ್ತು ಸಿಇಒ ಹಾಗೂ ಜಿಎಂಯು ವಿಶ್ವಸ್ತ ಮಂಡಳಿಯ ಸದಸ್ಯ ಪ್ರೊ. ಜಾನ್ ಆರ್.ರೇಮಂಡ್ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

21ನೇ ವಾರ್ಷಿಕೋತ್ಸವ ಆಚರಣೆ ಸಂದರ್ಭದಲ್ಲಿ ಬೆಳವಣಿಗೆ ಮತ್ತು ಶುದ್ಧತೆಯ ಸಂಕೇತವಾಗಿ ವಿವಿಯ ಕ್ಯಾಂಪಸ್‌ನಲ್ಲಿ ಬೇವಿನ ಗಿಡವೊಂದನ್ನು ನೆಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News