×
Ad

ಡ್ಯಾನ್ಸ್ ಬಾರ್ ಮೇಲೆ ಸಿಸಿಬಿ ದಾಳಿ: 120 ಮಹಿಳೆಯರ ರಕ್ಷಣೆ, 5 ಲಕ್ಷ ರೂ. ಜಪ್ತಿ

Update: 2019-11-09 20:00 IST

ಬೆಂಗಳೂರು, ನ.9: ಕಾನೂನು ಬಾಹಿರ ನಡೆಯುತ್ತಿದ್ದ ಡ್ಯಾನ್ಸ್ ಬಾರ್ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು, 120 ಮಹಿಳೆಯರನ್ನು ರಕ್ಷಿಸಿ, 5 ಲಕ್ಷ ರೂ. ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಇಲ್ಲಿನ ರೆಸಿಡೆನ್ಸಿ ರಸ್ತೆಯಲ್ಲಿರುವ ಟೈಮ್ಸ್ ಬಾರ್‌ನಲ್ಲಿ ಅಕ್ರಮವಾಗಿ ಕ್ಯಾಬರೆ ನಡೆಸಲಾಗುತ್ತಿದೆ ಎಂಬ ಬಗ್ಗೆ ಬಂದ ಖಚಿತ ಮಾಹಿತಿಯನ್ನಾಧರಿಸಿ ಈ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ದಾಳಿ ಸಂದರ್ಭದಲ್ಲಿ ಮದ್ಯದ ಅಮಲಿನಲ್ಲಿ ಹಲವರು ಮಹಿಳೆಯರ ಮೇಲೆ ಹಣ ಎಸೆಯುತ್ತಿದ್ದರು ಎನ್ನಲಾಗಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ 120 ಮಹಿಳೆಯರನ್ನು ರಕ್ಷಿಸಿ, ಇಲ್ಲಿನ ಬಾರ್ ಮಾಲಕರ ವಿರುದ್ಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News